2015-16ನೇ ಸಾಲಿನಲ್ಲಿ ಜಾಹೀರಾತಿನಿಂದಲೇ ಒಟ್ಟು 4.78 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ತಿಳಿಸಿದೆ.
ನವದೆಹಲಿ(ಡಿ.07): ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮ ಕೇವಲ ಲಕ್ಷಾಂತರ ಕೇಳುಗರವನ್ನು ಮಾತ್ರ ಹೊಂದಿಲ್ಲ, ಬದಲಾಗಿ ಸಾರ್ವಜನಿಕ ಪ್ರಸಾರ ಕೇಂದ್ರದ ಬೊಕ್ಕಸವನ್ನೂ ತುಂಬುತ್ತಿದೆ.
2015-16ನೇ ಸಾಲಿನಲ್ಲಿ ಜಾಹೀರಾತಿನಿಂದಲೇ ಒಟ್ಟು 4.78 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ತಿಳಿಸಿದೆ.
‘‘ಮನ್ ಕಿ ಬಾತ್ ಕಾರ್ಯಕ್ರಮ ಆದಾಯದ ಮೂಲವಾಗಿ ಬದಲಾಗಿದ್ದು ಎಐಆರ್ ಇದಕ್ಕೆ ಮೊದಲ ಆದ್ಯತೆ ನೀಡುತ್ತಿದೆ ಎಂದು ಪ್ರಸಾರ ಭಾರತಿ ತಿಳಿಸಿದೆ,’’ ಎಂದು ಐ ಅಂಡ್ ಬಿ ಕೇಂದ್ರ ಸಹಕಾರ ಸಚಿವ ರಾಜ್ಯವರ್ಧನ್ ರಾಥೋಡ್ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ.