ಈ ಹಿಂದೆ ಅಮೆರಿಕದ ಬಿಲ್​​ ಕ್ಲಿಂಟನ್‌, ಜಾರ್ಜ್​​ ಬುಶ್‌, ಬರಾಕ್​​ ಒಬಾಮಾ, ಡೊನಾಲ್ಡ್​ ಟ್ರಂಪ್‌ ಭೇಟಿ ನೀಡಿದ್ದ ವೇಳೆ ಈ ಹೋಟೆಲ್‌ನಲ್ಲಿ ಆತಿಥ್ಯ ನೀಡಲಾಗಿತ್ತು

ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಇಸ್ರೇಲ್‌ ಪ್ರವಾಸದಲ್ಲಿದ್ದಾರೆ. ವಿಶೇಷವೆಂದ್ರೆ ಮೋದಿ ಉಳಿದುಕೊಂಡಿರುವ ಸ್ಥಳ ವಿಶ್ವದ ಅತಿ ಸುರಕ್ಷಿತ ಸ್ಥಳಗಳಲ್ಲಿ ಒಂದು ಎಂಬುದು ತಿಳಿದು ಬಂದಿದೆ. ಇಸ್ರೇಲ್‌ನಲ್ಲಿರುವ ಪ್ರತಿಷ್ಠಿತ ಕಿಂಗ್‌ ಡೇವಿಡ್‌ ಹೋಟೆಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ವಾಸ್ತವ್ಯ ಹೂಡಿದ್ದಾರೆ. ಇಡೀ ಹೋಟೆಲ್‌ ಮೇಲೆ ಬಾಂಬ್‌ ದಾಳಿ, ಕೆಮಿಕಲ್‌ ದಾಳಿ ಸೇರಿದಂತೆ ಯಾವುದೇ ರೀತಿಯ ದಾಳಿ ನಡೆದರೂ ಏನೂ ಆಗೋದಿಲ್ವಂತೆ. ಪ್ರಧಾನಿ ಮೋದಿ ಹಾಗೂ ಅವರ ನಿಯೋಗಕ್ಕಾಗಿ 110 ಕೊಠಡಿಗಳನ್ನು ನೀಡಲಾಗಿದೆ. ಈ ಹಿಂದೆ ಅಮೆರಿಕದ ಬಿಲ್​​ ಕ್ಲಿಂಟನ್‌, ಜಾರ್ಜ್​​ ಬುಶ್‌, ಬರಾಕ್​​ ಒಬಾಮಾ, ಡೊನಾಲ್ಡ್​ ಟ್ರಂಪ್‌ ಭೇಟಿ ನೀಡಿದ್ದ ವೇಳೆ ಈ ಹೋಟೆಲ್‌ನಲ್ಲಿ ಆತಿಥ್ಯ ನೀಡಲಾಗಿತ್ತು. ಪ್ರಧಾನಿ ಮೋದಿ ಸದ್ಯ ನಮ್ಮ ಅತಿಥಿಯಾಗಿರುವ ಕಾರಣ ಅವರ ಆಹಾರ ಪದ್ಧತಿ ಬಗ್ಗೆ ಗಮನ ವಹಿಸಿರುವುದಾಗಿ ಕಿಂಗ್‌ ಡೇವಿಡ್‌ ಹೋಟೆಲ್‌‌ ನಿರ್ವಾಹಕ ನಿರ್ದೇಶಕ ಶೆಲ್ಡರ್‌‌ ತಿಳಿಸಿದ್ದಾರೆ.