ಪ್ರಧಾನಿಗೆ ಶ್ರೀ ಎಂದು ಸಂಬೋಧಿಸದ ಯೋಧನ ಸಂಬಳ ಕಟ್ : ಪ್ರಧಾನಿ ಅಸಮಾಧಾನ

First Published 7, Mar 2018, 4:03 PM IST
PM orders BSF to Revoke pay cut order against jawan
Highlights

ಪ್ರಧಾನಿಗೆ ಶ್ರೀ ಎಂದು ಸಂಬೋಧಿಸದ ಬಿಎಸ್ಎಫ್ ಯೋಧನ ಸಂಬಳವನ್ನು ಕಡಿತಗೊಳಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ

ನವದೆಹಲಿ : ಪ್ರಧಾನಿಗೆ ಶ್ರೀ ಎಂದು ಸಂಬೋಧಿಸದ ಬಿಎಸ್ಎಫ್ ಯೋಧನ ಸಂಬಳವನ್ನು ಕಡಿತಗೊಳಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ವಿರೋಧವಿದೆ ಎಂದು ತಿಳಿಸಿದ್ದಲ್ಲದೇ ಯೋಧರಿಗೆ ಈ ವಿಚಾರವಾಗಿ ಕಾನೂನಾತ್ಮಕವಾದ ಕ್ರಮಗಳನ್ನು ತೆಗೆದುಕೊಳ್ಳುವುದು ಸಮಂಜಸವಲ್ಲ ಎಂದು ಹೇಳಿದ್ದಾರೆ. ಅಲ್ಲದೇ  ಈ ಶಿಕ್ಷೆಯನ್ನು ತಕ್ಷಣವೇ ವಾಪಸ್ ಪಡೆಯಬೇಕು ಎಂದು ಹೇಳಿದ್ದಾರೆ.

ಬಿಎಸ್’ಎಫ್ ಯೋಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ನೀಡಿಲ್ಲ ಎಂದು 7 ದಿನಗಳ ಸಂಬಳವನ್ನು ಕಡಿತಗೊಳಿಸಲಾಗಿತ್ತು. ಫೆಬ್ರವರಿ 21 ರಂದು ಬಿಎಸ್ಎಫ್’ನ 15ನೇ ಬೆಟಾಲಿಯನ್’ನ ಹೆಡ್ ಕ್ವಾರ್ಟರ್ ‘ನಲ್ಲಿ  ನಿತ್ಯದ ಪರೇಡ್ ಸಂದರ್ಭದಲ್ಲಿ ಸಂಜೀವ್ ಕುಮಾರ್ ಎಂಬ ಬಿಎಸ್ಎಫ್ ಕಾನ್ಸ್ ಟೇಬಲ್  ವರದಿ ನೀಡುವಾಗ ಮೋದಿ ಕಾರ್ಯಕ್ರಮ ಎಂದು ಹೇಳಿದ್ದರು.

ಇದಕ್ಕೆ  ಕಮಾಂಡಂಟ್ ಅನೂಪ್ ಲಾಲ್ ಭಗತ್ ಅವರು  ದಿನಗಳ ಸಂಬಳವನ್ನು ಕಡಿತಗೊಳಿಸಿ ಆದೇಶ ನೀಡಿದ್ದರು. ಇದೀಗ  ಶಿಕ್ಷೆಯನ್ನು ವಾಪಸ್ ಪಡೆಯಲು ಆದೇಶ ನೀಡಲಾಗಿದೆ. 

loader