ನಾಳೆ ಬೆಂಗಳೂರಿಗೆ ನಮೋ ಆಗಮನ; ನಗರದಾದ್ಯಂತ ಬಿಗಿ ಭದ್ರತೆ

First Published 3, Feb 2018, 5:11 PM IST
PM Narendra Modi Will Come to Bengaluru tommorrow
Highlights

ನಾಳೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದು, ನಗರದಾದ್ಯಂತ ಬಿಗಿ ಭದ್ರತೆ ಒದಗಿಸಲಾಗಿದೆ.

ಬೆಂಗಳೂರು (ಫೆ.03): ನಾಳೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದು, ನಗರದಾದ್ಯಂತ ಬಿಗಿ ಭದ್ರತೆ ಒದಗಿಸಲಾಗಿದೆ.

11 ಡಿಸಿಪಿ, 33 ಎಸಿಪಿ, 122 ಇನ್ಸ್‌ಪೆಕ್ಟರ್ ಗಳು, 700 ಕ್ಕೂ ಎಸ್'ಐ ಸೇರಿ 63,000 ಕ್ಕೂ ಹೆಚ್ಚು ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ. 50 ಕೆಎಸ್'ಆರ್'ಪಿ ತುಕಡಿ, 30 ಸಿಎಆರ್ ತುಕಡಿ ನಿಯೋಜಿಸಲಾಗಿದೆ.   ಬಿಕೆ ಸಿಂಗ್ ಭದ್ರತೆಯ ಉಸ್ತುವಾರಿ ವಹಿಸಲಿದ್ದಾರೆ.  ಸಂಚಾರಿ ಪೊಲೀಸರಿಂದಲೂ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಹೇಳಿದ್ದಾರೆ.

ಬೆಂಗಳೂರು ಪೊಲೀಸರು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ.  ಸಂಚಾರ ಹೆಚ್ಚುವರಿ ಡಿಸಿಪಿ , 3 ಡಿಸಿಪಿ, 31 ಇನ್ಸ್‌ಪೆಕ್ಟರ್ ಸೇರಿ 1,000 ಕ್ಕೂ ಹೆಚ್ಚು ಪೊಲೀಸರಿಂದ ಸಂಚಾರಕ್ಕೆ ತೊಂದರೆ ಆಗದಂತೆ ಸಂಚಾರ ವ್ಯವಸ್ಥೆ ಮಾಡಲಾಗಿದೆ.  ಮಾವಿನಕಾಯಿ ಮಂಡಿ, ಪ್ಯಾಲೇಸ್ ಒಳಗೆ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ ಎಂದು ಕಮಿಷನರ್ ಸುನೀಲ್ ಕುಮಾರ್ ಹೇಳಿದ್ದಾರೆ.

ನಾವು ಯಾವುದೇ ಪ್ರತಿಭಟನೆಗಳನ್ನು ಸಮಾವೇಶಕ್ಕೆ ಬಿಡಲ್ಲ. ಪಕೋಡಾ ಮಾರಲು ನಮಗೆ ಯಾರು ಕೂಡ ಅನುಮತಿ ಕೇಳಿಲ್ಲ.  10 ದಿವಸದಿಂದ ಬಂದೋಬಸ್ತ್ ಬಗ್ಗೆ ನಿಗಾ ವಹಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ಎಲ್ಲಾ ನಡೆದಿದೆ. ಕೊಡಗುನಲ್ಲಿ ನಕ್ಸಲರು ಅಡಗಿರುವ ಹಿನ್ನೆಲೆಯಲ್ಲಿ ನಾವು ಗರುಡಾ ಫೋರ್ಸ್ ಅನ್ನು ಹೆಚ್ವುವರಿಯಾಗಿ ಭದ್ರತೆಗೆ ಬಳಸಿಕೊಂಡಿದ್ದೇವೆ. ಯಾವುದೇ ಅಹಿತಕರ ಘಟನೆ ನಡೆಯದ ರೀತಿ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.

loader