ನವದೆಹಲಿ (ಫೆ.07): ದೇಶದ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಲು ಆಗದ ನನ್ನಂತ ಸಾಕಷ್ಟು ಜನ ನತದೃಷ್ಟರು. ಆದರೆ ನಾವೆಲ್ಲ ಭಾರತದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ ಎನ್ನುವುದೇ ಹೆಮ್ಮಯ ವಿಚಾರ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿಂದು ಹೇಳಿದ್ದಾರೆ.

ನವದೆಹಲಿ (ಫೆ.07): ದೇಶದ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಲು ಆಗದ ನನ್ನಂತ ಸಾಕಷ್ಟು ಜನ ನತದೃಷ್ಟರು. ಆದರೆ ನಾವೆಲ್ಲ ಭಾರತದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ ಎನ್ನುವುದೇ ಹೆಮ್ಮಯ ವಿಚಾರ. ಬಡವರ ಹಿತಾಸಕ್ತಿಗಾಗಿ ಹೋರಾಡಿ ದೇಶವನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯುವುದೇ ನಮ್ಮ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿಂದು ಹೇಳಿದ್ದಾರೆ.

ನನ್ನ ಹಾಗೆ ಸಾಕಷ್ಟು ಜನ ಸ್ವತಂತ್ರೋತ್ತರ ಭಾರತದಲ್ಲಿ ಹುಟ್ಟಿದ್ದು. ಸ್ವತಂತ್ರ ಸಂಗ್ರಾಮದಲ್ಲಿ ಭಾಗವಹಿಸಲು ಆಗದ ನಾವೆಲ್ಲರೂ ನತದೃಷ್ಟರು. ಆದರೆ ನಾವಿಂದು ಭಾರತದಲ್ಲಿ ಬದುಕುತ್ತಿದ್ದೇವೆ, ಭಾರತಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎನ್ನುವುದೇ ಹೆಮ್ಮೆಯ ವಿಚಾರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಹಾತ್ಮ ಗಾಂಧೀಜಿ, ಇಂದಿರಾ ಗಾಂಧಿ ಮುಂತಾದವರು ಈ ದೇಶಕ್ಕಾಗಿ ಶ್ರಮಿಸಿದರು. ಆದರೆ ಬಿಜೆಪಿ ದೇಶವನ್ನು ಧಾರ್ಮಿಕತ್ತ ಕರೆದೊಯ್ಯುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆಗೆ ತಿರುಗೇಟು ನೀಡುತ್ತಾ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಿರೋಧ ಪಕ್ಷದ ಸಾಕಷ್ಟು ಮುಖಂಡರು ಜೈಲು ಸೇರಿದ್ದರು. ಅಭಿವ್ಯಕ್ತಿ ಸ್ವಾತಂತ್ರವನ್ನು ಹಿಂತೆಗೆದುಕೊಳ್ಳಲಾಗಿತ್ತು ಎಂದಿದ್ದಾರೆ. 

ನೋಟು ಅಮಾನ್ಯದ ಬಗ್ಗೆ ಸದಾ ಕಿಡಿಕಾರುತ್ತಿರುವ ವಿರೋಧಪಕ್ಷದವರಿಗೆ ಪ್ರತಿಕ್ರಿಯಿಸುತ್ತಾ, ಡಿಮಾನಿಟೈಸೇಶನ್ ಸ್ವಚ್ಚ ಭಾರತ ಇದ್ದಂತೆ. ಕಪ್ಪುಹಣ ಹಾಗೂ ಭ್ರಷ್ಟಾಚಾರವನ್ನು ತೊಡೆದು ಹಾಕುತ್ತದೆ. ದೇಶದ ಆರ್ಥಿಕತೆಗೆ ನೋಟು ನಿಷೇಧ ಅಗತ್ಯವಿತ್ತು. ಹಾಗಾಗಿ ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.