ಎರಡು ದಿನಗಳ ಕಾಲ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಭಿವೃದ್ಧಿ ಮಾದರಿಯನ್ನು ಟೀಕಿಸುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯ ಅಭಿವೃದ್ದಿ ಮಂತ್ರವಾದ ವಿಕಾಸವನ್ನು ಕಾಂಗ್ರೆಸ್ ಅವಕಾಶ ಸಿಕ್ಕಾಗಲೆಲ್ಲಾ ತಮಾಷೆ ಮಾಡುವುದಕ್ಕೆ ಮೋದಿ ಪ್ರತ್ಯುತ್ತರ ನೀಡಿದ್ದಾರೆ.
ನವದೆಹಲಿ (ಅ.07): ಎರಡು ದಿನಗಳ ಕಾಲ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಭಿವೃದ್ಧಿ ಮಾದರಿಯನ್ನು ಟೀಕಿಸುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯ ಅಭಿವೃದ್ದಿ ಮಂತ್ರವಾದ ವಿಕಾಸವನ್ನು ಕಾಂಗ್ರೆಸ್ ಅವಕಾಶ ಸಿಕ್ಕಾಗಲೆಲ್ಲಾ ತಮಾಷೆ ಮಾಡುವುದಕ್ಕೆ ಮೋದಿ ಪ್ರತ್ಯುತ್ತರ ನೀಡಿದ್ದಾರೆ.
ರಾಜ್’ಕೋಟ್’ನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕು ಸ್ಥಾಪನೆ ಮಾಡುತ್ತಾ, ನೀವು ವಿಕಾಸವನ್ನು ಬಯಸುತ್ತೀರಾ? ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನೀವು ಪಡೆಯುವ ಕನಸನ್ನು ಹೊಂದಿದ್ದಿರಾ ಎಂದು ಜನತೆಯನ್ನು ಪ್ರಶ್ನಿಸಿದ್ದಾರೆ.
ಇಲ್ಲಿ ಏರ್’ಪೋರ್ಟ್ ನಿರ್ಮಾಣವಾಗುತ್ತಿರುವುದನ್ನು ನಾವು ವಿಕಾಸ ಎಂದು ಕರೆಯಬಹುದೇ? ನಮಗೆ ಅಭಿವೃದ್ದಿಯ ಅಗತ್ಯವಿದೆಯಾ? ಇದು ನಮ್ಮ ಭವಿಷ್ಯವನ್ನು ಬದಲಾಯಿಸುತ್ತದೆಯಾ? ಎಂದು ಜನತೆಯನ್ನು ಪ್ರಶ್ನಿಸಿದಾಗ ಎಲ್ಲರೂ ಒಕ್ಕೊರಲಿನಿಂದ ಹೌದು ಎಂದು ಕೂಗಿದ್ದಾರೆ.
ಗಾಂಧಿನಗರಕ್ಕೆ ಐಐಟಿಯನ್ನು ಘೋಷಣೆ ಮಾಡುತ್ತಾ ಆಡಳಿತವನ್ನು ಇನ್ನಷ್ಟು ಚುರುಕುಗೊಳಿಸಲು, ಅಭಿವೃದ್ಧಿಪಡಿಸಲು ಟೆಕ್ನಾಲಜಿಯನ್ನು ಪ್ರಭಾವಶಾಲಿಯಾಗಿ ಬಳಸಿಕೊಳ್ಳುವುದು ನಮ್ಮ ಉದ್ದೇಶ ಎಂದಿದ್ದಾರೆ.
