ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗಿನಿಂದ ವಿದೇಶಿ ಪ್ರವಾಸಕ್ಕೆ ಒಟ್ಟು . 377,67,17,465 ವೆಚ್ಚ ಮಾಡಿರುವ ಅಂಶ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯಲ್ಲಿ ಬಹಿರಂಗವಾಗಿದೆ. 

ಬೆಳಗಾವಿ : ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗಿನಿಂದ ವಿದೇಶಿ ಪ್ರವಾಸಕ್ಕೆ ಒಟ್ಟು . 377,67,17,465 ವೆಚ್ಚ ಮಾಡಿರುವ ಅಂಶ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯಲ್ಲಿ ಬಹಿರಂಗವಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೂಡಲಗಿಯ ಮಾಹಿತಿ ಹಕ್ಕು ಕಾರ್ಯಕರ್ತ, ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಭೀಮಪ್ಪ ಗಡಾದ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.

2014ರ ಜೂನ್‌ನಿಂದ 2018ರ ಜನವರಿವರೆಗೆ ಒಟ್ಟು 48 ತಿಂಗಳ ಅವಧಿಯಲ್ಲಿ ಪ್ರಧಾನಿ ಮೋದಿ 165 ದಿನಗಳ ಕಾಲ ವಿದೇಶಿ ಪ್ರವಾಸ ಮಾಡಿದ್ದಾರೆ. ಈ ಅವಧಿಯಲ್ಲಿ 52 ದೇಶಗಳಿಗೆ ಭೇಟಿ ನೀಡಿದ್ದಾರೆ.

ಫ್ರಾನ್ಸ್‌, ಜರ್ಮನಿ ಹಾಗೂ ಕೆನಡಾ ರಾಷ್ಟ್ರಗಳಿಗೆ 9 ದಿನಗಳ ನರೇಂದ್ರ ಮೋದಿ ಪ್ರವಾಸಕ್ಕೆ ಅತೀ ಹೆಚ್ಚು ಅಂದರೆ . 32.25 ಕೋಟಿ ವೆಚ್ಚವಾಗಿದೆ. ಎರಡು ದಿನಗಳ ಭೂತಾನ್‌ ದೇಶದ ಪ್ರವಾಸಕ್ಕೆ ಅತಿ ಕಡಿಮೆ ಎಂದರೆ .2.45 ಕೋಟಿ ವೆಚ್ಚ ಮಾಡಲಾಗಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯದ ಮಾಹಿತಿ ನೀಡಿದೆ.