ನವದೆಹಲಿ[ಸೆ.11]: ಸಾಮಾಜಿಕ ಜಾಲತಾಣಗಳ ಮೂಲಕ ಜನ ಸಮುದಾಯವನ್ನು ತಲುಪುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಟ್ವೀಟರ್‌ನಲ್ಲಿ 5 ಕೋಟಿಗೂ ಅಧಿಕ ಹಿಂಬಾಲಕರನ್ನು ಸಂಪಾದಿಸಿದ್ದಾರೆ. ಈ ಮೂಲಕ ಟ್ವಿಟರ್‌ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ವಿಶ್ವದ ಮೂರನೇ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

6.4 ಕೋಟಿ ಹಿಂಬಾಲಕರನ್ನು ಹೊಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ನಾಯಕರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. 10.8 ಕೋಟಿ ಹಿಂಬಾಲಕರನ್ನು ಹೊಂದಿರುವ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಈಗಲೂ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ.

ತುಳು ಟ್ವೀಟ್ ಅಭಿಯಾನಕ್ಕೆ ಅಣ್ಣಾಮಲೈ ಬೆಂಬಲ..!

ಇನ್ನು ಪ್ರಧಾನಿ ಕಚೇರಿಯ ಅಧಿಕೃತ ಟ್ವೀಟರ್‌ ಖಾತೆಯ ಹಿಂಬಾಲಕರ ಸಂಖ್ಯೆ ಕೂಡಾ 3 ಕೋಟಿ ದಾಟಿದೆ. ಭಾರತದ ಯಾವ ರಾಜಕಾರಣಿ ಕೂಡ ಮೋದಿ ಸನಿಹಕ್ಕೂ ತಲುಪಿಲ್ಲ. ಮೋದಿ ಅವರು ಫೇಸ್‌ಬುಕ್‌ನಲ್ಲೂ ಸಕ್ರಿಯವಾಗಿದ್ದು, 4.4 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ. ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ 2.5 ಕೋಟಿ ಹಿಂಬಾಲಕರಿದ್ದಾರೆ.