‘ನನ್ನ ಯುವ ಮಿತ್ರರು ಮತ್ತು ನಾನು’! ಪ್ರಧಾನಿ ಮೋದಿ ಅವರ ಯುವ ಮಿತ್ರರನ್ನು ಕಂಡಿರಾ?! ಮಕ್ಕಳೊಂದಿಗೆ ‘ಕಾನ್ ಕಿ ಬಾತ್’ ಮಾಡುವ ಮೋದಿ! ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮೋದಿ ಫೋಟೋ! ಮೋದಿ ಫೋಟೋಗೆ ಲಘು ಹಾಸ್ಯ ಮಾಡಿದ ನೆಟಿಜನ್ಸ್
ನವದೆಹಲಿ(ಸೆ.21): ಪ್ರಧಾನಿ ನರೇಂದ್ರ ಮೋದಿ ಕಳೆದ ಸೆ.17 ರಂದು ತಮ್ಮ 68ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಸ್ವಕ್ಷೇತ್ರ ವಾರಣಾಸಿಯಲ್ಲಿ ಮಕ್ಕಳ ಜೊತೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಟ ಮೋದಿ, ಮಕ್ಕಳ ಜೊತೆಗಿನ ಮಧುರ ಕ್ಷಣಗಳನ್ನು ತಮ್ಮ ಇನ್ಸಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಹುಟ್ಟುಹಬ್ಬದಂದು ವಾರಣಾಸಿಯಲ್ಲಿದ್ದ ಪ್ರಧಾನಿ ಮೋದಿ, ಶಾಲಾ ಮಕ್ಕಳೊಂದಿಗೆ ನಕ್ಕು ನಲಿದರು. ಈ ವೇಳೆ ಶಾಲಾ ಬಾಲಕನೋರ್ವನ ಕಿವಿ ಹಿಂಡುತ್ತಿರುವ ಮೋದಿ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಪಡೆಯುತ್ತಿದೆ. ಮೋದಿ ಈ ಫೋಟೋಗೆ ‘ನನ್ನ ಯುವ ಮಿತ್ರರು ಮತ್ತು ನಾನು’ ಎಂಬ ಶಿರ್ಷಿಕೆ ಕೂಡ ನೀಡಿದ್ದಾರೆ.
ಇನ್ನು ಪ್ರಧಾನಿ ಮೋದಿ ಮಕ್ಕಳನ್ನು ಎದುರುಗೊಂಡಾಗ ಅವರ ಕಿವಿ ಹಿಂಡುವುದು ಸಾಮಾನ್ಯವಾಗಿದ್ದು. ಮೋದಿ ಮಕ್ಕಳೊಂದಿಗೆ ಯಾವಾಗಲೂ ‘ಕಾನ್ ಕಿ ಬಾತ್’ ಮಾಡುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಲಘು ಹಾಸ್ಯ ಮಾಡಿದ್ದಾರೆ.
ಇದಕ್ಕೆ ಉದಾಹರಣೆ ಎಂಬಂತೆ ಕೆನಡಾ ಪ್ರಧಾನಿ ಜಸ್ಟೀನ್ ಟ್ರಾಡೋ ಭಾರತಕ್ಕೆ ಬಂದಾಗ, ಅವರ ಮಗಳ ಕಿವಿ ಹಿಂಡಿದ ಫೋಟೋವನ್ನು ಕೆಲವರು ಶೇರ್ ಮಾಡಿದ್ದಾರೆ.
ಅದರಂತೆ ನೌಕಾಸೇನೆಯ ಸಮಾರಂಭವೊಂದರಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮಗ ಆರವ್ ಅವರ ಕಿವಿ ಹಿಂಡಿದ ಫೋಟೋ ಕೂಡ ಮತ್ತೆ ವೈರಲ್ ಆಗಿದೆ.
