ಸಿಂಗಾಪುರ ಮಸೀದಿಗೆ ಭೇಟಿ ನೀಡಿದ ಪ್ರಧಾನಿ ಮೋದಿ

First Published 3, Jun 2018, 4:10 PM IST
PM Modi  Visits Mosque in Singapore
Highlights
  • ಪ್ರಧಾನಿ ಮೋದಿ 5 ದಿನಗಳ ಇಂಡೋನೇಶಿಯಾ, ಮಲೇಶಿಯಾ ಮತ್ತು ಸಿಂಗಾಪುರ ಪ್ರವಾಸ
  • ಸಿಂಗಾಪುರದಲ್ಲಿ ಮಸೀದಿ, ದೇವಸ್ಥಾನಗಳಿಗೆ ಪ್ರಧಾನಿ ಮೋದಿ ಭೇಟಿ

ಬೆಂಗಳೂರು: ಪ್ರಧಾನಿ ಮೋದಿ 5 ದಿನಗಳ ವಿದೇಶ ಪ್ರವಾಸದಿಂದ ಶನಿವಾರ ವಾಪಾಸಾಗಿದ್ದಾರೆ.  ಇಂಡೋನೇಶಿಯಾ, ಮಲೇಶಿಯಾ ಭೇಟಿ ಬಳಿಕ ಪ್ರಧಾನಿ ಮೋದಿ ಶನಿವಾರ ಸಿಂಗಾಪುರಕ್ಕೆ ಭೇಟಿ ನೀಡಿದ್ದರು. 

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಸಿಂಗಾಪುರದ ವಿವಿಧ ಧಾರ್ಮಿಕ ಸ್ಥಳಗಳಿಗೂ ಭೇಟಿ ನೀಡಿದ್ದಾರೆ. ಇಲ್ಲಿನ ಹಳೆಯ ಮಸೀದಿಗಳಲ್ಲೊಂದಾದ ಚುಲಿಯಾ ಮಸೀದಿಗೂ ಪ್ರಧಾನಿ ಭೇಟಿ ನೀಡಿದ್ದರು.

ಬಳಿಕ ಸಿಂಗಾಪುರದ ಮಾರಿಯಮ್ಮನ್ ದೇವಸ್ಥಾನಕ್ಕೂ ಪ್ರಧಾನಿ ಭೇಟಿ ನೀಡಿದ್ದಾರೆ.

ಸಿಂಗಾಪುರದ ಖ್ಯಾತ ಬುದ್ಧ ಟೂತ್ ರೆಲಿಕ್ ಮಂದಿರಕ್ಕೂ ಭೇಟಿ ನೀಡಿದ ಮೋದಿ, ಬಳಿಕ ಮ್ಯೂಸಿಯಂಗೂ ಭೇಟಿ ನೀಡಿದ್ದಾರೆ.

 

loader