ರಾಜಕೀಯವನ್ನು ದೇಶಕ್ಕಾಗಿ ಮಾಡುವ ಸೇವೆಯೆಂದು ಪರಿಗಣಿಸಿದರೆ, ಸಾವಿರಾರು ಮಂದಿ ಆ ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲಿ ವಿಶೇಷವಾದದ್ದೇನಿದೆ? ಎಂದು ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಪ್ರಶ್ನಿಸಿದ್ದಾರೆ.
ನವದೆಹಲಿ (ನ.14): ಪ್ರಧಾನಿ ನರೇಂದ್ರ ಮೋದಿಯವರ ನಿನ್ನೆಯ ಪಣಜಿ ಭಾಷಣದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ದೇಶಕ್ಕಾಗಿ ಮನೆ-ಕುಟುಂಬ ತೊರೆದಿದ್ದೇನೆ ಎಂಬ ಹೇಳಿಕೆಗಳು ‘ಕೀಳು ಮಟ್ಟದ ರಾಜಕೀಯದ ಪರಮಾವಧಿಯಾಗಿದೆ’ ಎಂದು ಟೀಕಾಪ್ರಹಾರ ನಡೆಸಿದೆ.
ರಾಜಕೀಯವನ್ನು ದೇಶಕ್ಕಾಗಿ ಮಾಡುವ ಸೇವೆಯೆಂದು ಪರಿಗಣಿಸಿದರೆ, ಸಾವಿರಾರು ಮಂದಿ ಆ ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲಿ ವಿಶೇಷವಾದದ್ದೇನಿದೆ? ಎಂದು ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಪ್ರಶ್ನಿಸಿದ್ದಾರೆ.
ಮಾಡುವ ಕೆಲಸವನ್ನು ಮಾಡಬೇಕು, ಅದನ್ನು ಹೇಳಿಕೊಳ್ಳುವುದು ಒಂದು ರೀತಿಯ ಕೀಳು ಕ್ರಮವಾಗಿದೆ. ಅದರರ್ಥ ತಾವು ಯಾವುದೇ ತ್ಯಾಗಗಳನ್ನು ಮಾಡಿಲ್ಲ, ಮಾಡಿರುವುದೆಲ್ಲಾ ತೋರಿಕೆಗಾಗಿ. ಇದನ್ನು ಕೀಳು ಮಟ್ಟ ರಾಜಕೀಯದ ಪರಮಾವಧಿ ಎಂದೇ ಹೇಳಬೇಕಾಗುತ್ತದೆ, ಎಂದು ದೀಕ್ಷಿತ್ ಹೇಳಿದ್ದಾರೆ.
ನಿನ್ನೆ ಪಣಜಿಯಲ್ಲಿ ಭಾಷಣ ಮಾಡುತ್ತಿರುವ ವೇಳೆ ಭಾವುಕರಾಗಿದ್ದ ಪ್ರಧಾನಿ ಮೋದಿ, ತಾನು ದೇಶಕ್ಕಾಗಿ ಮನೆ-ಮಠಗಳನ್ನು ತ್ಯಜಿಸಿರುವುದಾಗಿ ಹೇಳಿದ್ದರು.