ಮ್ಯಾಲೆ[ಜೂ.07]: ಇತ್ತೀಚೆಗಷ್ಟೇ ಎರಡನೇ ಬಾರಿಗೆ ಪ್ರಧಾನಿ ಹುದ್ದೆ ಏರಿರುವ ನರೇಂದ್ರ ಮೋದಿ, ಶನಿವಾರದಿಂದ ತಮ್ಮ ಮೊದಲ ವಿದೇಶ ಯಾತ್ರೆ ಆರಂಭಿಸಲಿದ್ದಾರೆ. ಮೋದಿ ಅವರು ಶನಿವಾರ ದ್ವೀಪರಾಷ್ಟ್ರ ಮಾಲ್ಡೀವ್ಸ್‌ಗೆ ಭೇಟಿ ನೀಡಲಿದ್ದಾರೆ.

ಇತ್ತೀಚೆಗೆ ನಡೆದ ತಮ್ಮ ಪ್ರಮಾಣ ವಚನ ಕಾರ್ಯಕ್ರಮದಿಂದ ಪಾಕಿಸ್ತಾನವನ್ನು ಹೊರಗಿಡುವ ನಿಟ್ಟಿನಲ್ಲಿ ಮೋದಿ ಅವರು ಬಿಮ್‌ಸ್ಟೆಕ್‌ ದೇಶಗಳ ಗಣ್ಯರಿಗೆ ಆಹ್ವಾನ ನೀಡಿದ್ದರು. ಆದರೆ ಬಿಮ್‌ಸ್ಟೆಕ್‌ ದೇಶಗಳಲ್ಲಿ ಮಾಲ್ಡೀವ್ಸ್‌ ಇಲ್ಲ. ಹೀಗಾಗಿಯೇ ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವವಾಗಿರುವ ಮಾಲ್ಡೀವ್ಸ್ ಜೊತೆಗಿನ ಭಾರತದ ಸಂಬಂಧವನ್ನು ಸಾರಿಹೇಳುವ ನಿಟ್ಟಿನಲ್ಲಿ ಮೋದಿ ಅವರು ಆ ದೇಶಕ್ಕೇ ತಮ್ಮ ಮೊದಲ ವಿದೇಶಿ ನಿಗದಿ ಮಾಡಿದರು ಎನ್ನಲಾಗಿದೆ.

ಇನ್ನು ಇತ್ತೀಚೆಗೆ 250ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಶ್ರೀಲಂಕಾ ದೇಶಕ್ಕೆ ನೈತಿಕ ಬೆಂಬಲ ವ್ಯಕ್ತಪಡಿಸುವ ನಿಟ್ಟಿನಲ್ಲಿ ಭಾನುವಾರ ಮೋದಿ ಅಲ್ಲಿಗೆ ತೆರಳಲಿದ್ದಾರೆ. ಶನಿವಾರ ಬೆಳಗ್ಗೆ ಗುರುವಾಯೂರು ದೇಗುಲ ಭೇಟಿ ಬಳಿಕ ಮೋದಿ ಮಾಲ್ಡೀವ್‌್ಸಗೆ ತೆರಳಲಿದ್ದಾರೆ. ಭಾನುವಾರ ಬೆಳಗ್ಗೆ ಶ್ರೀಲಂಕಾಕ್ಕೆ ತೆರಳಲಿರುವ ಮೋದಿ, ಅಲ್ಲಿಂದ ಸಂಜೆ ವೇಳೆಗೆ ತಿರುಪತಿಗೆ ಆಗಮಿಸಲಿದ್ದಾರೆ.