Asianet Suvarna News Asianet Suvarna News

ಇಂದಿನಿಂದ ದಾವೋಸ್'ನಲ್ಲಿ ವಿಶ್ವ ಆರ್ಥಿಕ ಶೃಂಗ ಸಭೆ; 20 ವರ್ಷಗಳ ಬಳಿಕ ಭಾರತದ ಪ್ರಧಾನಿ ಭಾಗಿ

ಶ್ರೀಮಂತ ಹಾಗೂ ಶಕ್ತಿ ಶಾಲಿ ರಾಷ್ಟ್ರಗಳು ಭಾಗಿಯಾಗುವ ವಿಶ್ವ ಆರ್ಥಿಕ ಶೃಂಗ ಸಭೆ ಸ್ವಿಜರ್ಲೆಂಡ್‌'ನ ದಾವೋಸ್‌ನಲ್ಲಿ ಇಂದಿನಿಂದ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆರು ಸಚಿವರು ಸೇರಿದಂತೆ 130 ಪ್ರತಿನಿಧಿಗಳೊಂದಿಗೆ ಈ ಶೃಂಗದಲ್ಲಿ ಭಾಗಿಯಾಗುತ್ತಿದ್ದಾರೆ.

PM Modi to visit Davos for WEF 2018

ಬೆಂಗಳೂರು (ಜ.22): ಶ್ರೀಮಂತ ಹಾಗೂ ಶಕ್ತಿ ಶಾಲಿ ರಾಷ್ಟ್ರಗಳು ಭಾಗಿಯಾಗುವ ವಿಶ್ವ ಆರ್ಥಿಕ ಶೃಂಗ ಸಭೆ ಸ್ವಿಜರ್ಲೆಂಡ್‌'ನ ದಾವೋಸ್‌ನಲ್ಲಿ ಇಂದಿನಿಂದ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆರು ಸಚಿವರು ಸೇರಿದಂತೆ 130 ಪ್ರತಿನಿಧಿಗಳೊಂದಿಗೆ ಈ ಶೃಂಗದಲ್ಲಿ ಭಾಗಿಯಾಗುತ್ತಿದ್ದಾರೆ.

20 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 1997 ರಲ್ಲಿ ಪ್ರಧಾನಿ ದೇವೇಗೌಡರ ಅವರು ಇದರಲ್ಲಿ ಭಾಗವಹಿಸಿದ್ದರು. ಆನಂತರ

ಯಾರೊಬ್ಬರೂ ಪಾಲ್ಗೊಂಡಿರಲಿಲ್ಲ. ಈ ಬಾರಿಯ ವಿಶೇಷವೆಂದರೆ, ಭಾರತೀಯ ವಿಶಿಷ್ಟ ಪಾಕಶಾಸ್ತ್ರವನ್ನು ಜಾಗತಿಕ ನಾಯಕರಿಗೆ ಭಾರತ ಪರಿಚಯಿಸಲಿದೆ. ಜತೆಗೆ ಶೃಂಗಸಭೆ ನಡೆಯುವ ಐದೂ ದಿನಗಳ ಕಾಲ ಭಾರತದ ಪುರಾತನ ವ್ಯಾಯಾಮವಾದ  ಯೋಗ ತರಬೇತಿಯನ್ನು ನೀಡಲಾಗುತ್ತದೆ.

ಇಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಯೋಗ ಪ್ರದರ್ಶನವಿರುತ್ತದೆ. ಜತೆಗೆ ಬಾಲಿವುಡ್‌ನ ಪ್ರಸಿದ್ಧ ನಟ ಶಾರುಖ್ ಖಾನ್ ಅವರನ್ನು ಸನ್ಮಾನಿಸುವ ಕಾರ್ಯಕ್ರಮವೂ ಆಯೋಜನೆಗೊಂಡಿದೆ.

ಒಟ್ಟು 24 ತಾಸು ದಾವೋಸ್‌ನಲ್ಲಿರುವ ಅವರು, ಆರ್ಥಿಕ ಶೃಂಗದಲ್ಲಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸುಮಾರು 70 ದೇಶಗಳ ಮುಖ್ಯಸ್ಥರು ಅಥವಾ ಸರ್ಕಾರಗಳ ಪ್ರತಿನಿಧಿಗಳು ಈ ಶೃಂಗದಲ್ಲಿ ಪಾಲ್ಗೊಳ್ಳಲಿದ್ದು, ಭಾರತದ ಪಾಲಿಗೆ ಮಹತ್ವದ್ದೆನ್ನಿಸಿದೆ. ಈ ನಡುವೆ, 20 ಭಾರತೀಯ ಹಾಗೂ 40 ವಿದೇಶಿ ಸಿಇಒಗಳನ್ನು ಉದ್ದೇಶಿಸಿ ಕೂಡ ಮೋದಿ ಸೋಮವಾರ ಮಾತನಾಡಲಿದ್ದಾರೆ. ಅಲ್ಲದೆ, ವಿಶ್ವ ಆರ್ಥಿಕ ವೇದಿಕೆಯ ಅಂತಾರಾಷ್ಟ್ರೀಯ ಉದ್ಯಮ ಸಮೂಹದ 120 ಸದಸ್ಯರನ್ನುದ್ದೇಶಿಸಿ ಮಂಗಳವಾರ ಭಾಷಣ ಮಾಡಲಿದ್ದಾರೆ.

ಜಾಗತಿಕ ಆರ್ಥಿಕ ಪ್ರಗತಿಗೆ ಭಾರತ ಎಂಬುದು ಪ್ರಮುಖ ಎಂಜಿನ್ ಇದ್ದಂತೆ ಎಂದು ಸಾರುವುದರ ಜತೆಗೆ ಭಾರತದಲ್ಲಿ ಹೂಡಿಕೆ ಮಾಡುವಂತೆ ಉದ್ಯಮಿಗಳಿಗೆ ಆಹ್ವಾನ ನೀಡುವ ಸಾಧ್ಯತೆ ಇದೆ.

 

Follow Us:
Download App:
  • android
  • ios