ಉಪವಾಸ ಸಂದರ್ಭದಲ್ಲಿ ಮೋದಿ ಕೇವಲ ಬಿಸಿ ನೀರನ್ನು ಮಾತ್ರ ಸೇವಿಸುತ್ತಾರೆ. 2014ರಲ್ಲಿ ನವರಾತ್ರಿ ಸಂದರ್ಭದಲ್ಲಿ ಮೋದಿ ಅಮೆರಿಕಾ ಪ್ರವಾಸದಲ್ಲಿದ್ದರೂ, ತಾನು ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವನ್ನು ಮುರಿದಿರಲಿಲ್ಲ.

ನವದೆಹಲಿ (ಮಾ.27): ನಾಳೆಯಿಂದ (ಮಂಗಳವಾರ) ನವರಾತ್ರಿ ಆರಂಭವಾಗಲಿದ್ದು, ಪ್ರಧಾನಿ ಮೋದಿ 9 ದಿವಸಗಳ ಉಪವಾಸ ಆಚರಿಸಲಿದ್ದಾರೆ.

ಪ್ರಧಾನಿ ಮೋದಿ ಕಳೆದ ನಾಲ್ಕು ದಶಕಗಳಿಂದ ನವರಾತ್ರಿಯ 9-ದಿವಸಗಳ ಉಪವಾಸ ಕೈಗೊಳ್ಳುತ್ತಿದ್ದು, ಈ ಬಾರಿಯೂ ಅದನ್ನು ಮುಂದುವರಿಸಲಿದ್ದಾರೆ.

ಉಪವಾಸ ಸಂದರ್ಭದಲ್ಲಿ ಮೋದಿ ಕೇವಲ ಬಿಸಿ ನೀರನ್ನು ಮಾತ್ರ ಸೇವಿಸುತ್ತಾರೆ. 2014ರಲ್ಲಿ ನವರಾತ್ರಿ ಸಂದರ್ಭದಲ್ಲಿ ಮೋದಿ ಅಮೆರಿಕಾ ಪ್ರವಾಸದಲ್ಲಿದ್ದರೂ, ತಾನು ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವನ್ನು ಮುರಿದಿರಲಿಲ್ಲ.

ಉತ್ತರ ಭಾರತದಲ್ಲಿ ನಾಳೆಯಿಂದ ಚೈತ್ರ ನವರಾತ್ರಿ ಪ್ರಾರಂಭವಾಗಲಿದ್ದು, 9 ದಿನಗಳ ಕಾಲಪೂಜೆ ಪುರಸ್ಕಾರಗಳನ್ನು ನಡೆಸಲಾಗುತ್ತದೆ.