ನವದೆಹಲಿ(ಡಿ.30): ಪ್ರಸಕ್ತ ವರ್ಷದ ಕೊನೆಯ ಮನ್ ಬಾತ್ ಕಿ ಮಾತ್ ನಲ್ಲಿ ದೇಶದ ಜನತೆಯನ್ನುದ್ದೇಶಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ಪ್ರಗತಿಗಾಗಿ ಕೆಲಸ ಮಾಡುವಂತೆ ಕರೆ ನೀಡಿದ್ದಾರೆ. 

2018 ವರ್ಷ ಅಂತ್ಯಗೊಳ್ಳುತ್ತಿದ್ದು, 2019ನೇ ನೂತನ ವರ್ಷ ಆರಂಭವಾಗುತ್ತಿದೆ. ಕಳೆದ ವರ್ಷದ ಕುರಿತು ಚರ್ಚೆಗಳು ನಡೆಯುವುದು ಸಾಮಾನ್ಯ. ಹೊಸ ವರ್ಷ ಬರುತ್ತಿದ್ದು, ಸಂಕಲ್ಪ ಮಾಡುವ ಸಮಯ ಕೂಡ ಹತ್ತಿರ ಬಂದಿದೆ. ನಮ್ಮ ಜೀವನವನ್ನು ನಾವು ಬದಲಿಸಿಕೊಳ್ಳಬೇಕು. ದೇಶ ಹಾಗೂ ಸಮಾಜದ ಪ್ರಗತಿಗಾಗಿ ಕೊಡುಗೆ ನೀಡಬೇಕೆಂದು ಮೋದಿ ಹೇಳಿದ್ದಾರೆ. 

ಇನ್ನು ಸರ್ಕಾರ ಸಾಧನೆಗಳ ಕುರಿತು ಮಾಹಿತಿ ನೀಡಿದ ಪ್ರಧಾನಿ, 2018ರಲ್ಲಿ ವಿಶ್ವದ ಅತೀದೊಡ್ಡ ಆರೋಗ್ಯ ಯೋಜನೆ ಆಯುಷ್ಮಾನ್ ಭಾರತ್, ಏಕತಾ ಪ್ರತಿಮೆ ಅನಾವರಣ ಇನ್ನಿತರ ಸಾಧನೆ ಕುರಿತು ಮಾತನಾಡಿದರು.