Asianet Suvarna News Asianet Suvarna News

ಭಾಷಣ ವೇಳೆ ನಮಾಜ್ ಧ್ವನಿ; ಆಜಾನ್ ಮುಗಿಯುವವರೆಗೂ ಮಾತು ನಿಲ್ಲಿಸಿದ ಮೋದಿ

ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಘಟನೆಯೊಂದು ನಡೆಯಿತು. ನವ್‌ಸರಿಯಲ್ಲಿ ಭಾಷಣ ಮಾಡುವ ಸಂದರ್ಭದಲ್ಲೇ ನಮಾಜ್ ಧ್ವನಿ ಕೇಳಿಸಿತು. ಆಜಾನ್ ಪೂರ್ಣವಾಗುವವರೆಗೂ ಭಾಷಣವನ್ನು ನಡುವೆ ನಿಲ್ಲಿಸಿ ಮೌನವಾಗಿ ನಿಂತುಕೊಂಡರು. ಆಜಾನ್ ಪೂರ್ಣಗೊಂಡ ಬಳಿಕ ಮತ್ತೆ ತಮ್ಮ ಭಾಷಣ ಮುಂದುವರೆಸಿದರು. ಪ್ರಧಾನಿ ಮೋದಿ ಅವರ ಈ ನಡೆ ಜನರನ್ನು ಚಕಿತಗೊಳಿಸಿತು.

PM Modi Stopped his Election Speech while hearing Ajaan Sound

ಗುಜರಾತ್ (ನ.30): ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಘಟನೆಯೊಂದು ನಡೆಯಿತು. ನವ್‌ಸರಿಯಲ್ಲಿ ಭಾಷಣ ಮಾಡುವ ಸಂದರ್ಭದಲ್ಲೇ ನಮಾಜ್ ಧ್ವನಿ ಕೇಳಿಸಿತು. ಆಜಾನ್ ಪೂರ್ಣವಾಗುವವರೆಗೂ ಭಾಷಣವನ್ನು ನಡುವೆ ನಿಲ್ಲಿಸಿ ಮೌನವಾಗಿ ನಿಂತುಕೊಂಡರು. ಆಜಾನ್ ಪೂರ್ಣಗೊಂಡ ಬಳಿಕ ಮತ್ತೆ ತಮ್ಮ ಭಾಷಣ ಮುಂದುವರೆಸಿದರು. ಪ್ರಧಾನಿ ಮೋದಿ ಅವರ ಈ ನಡೆ ಜನರನ್ನು ಚಕಿತಗೊಳಿಸಿತು.

ಮೋದಿಯ ಈ ನಡೆ ಬಗ್ಗೆ ಹಲವರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ನಮಾಜ್ ವೇಳೆ ಮೋದಿ ಅವರು ಭಾಷಣ ನಿಲ್ಲಿಸಿದ್ದು ಇದೇ ಮೊದಲಲ್ಲ. ಈ ಹಿಂದೊಮ್ಮೆ ಪಶ್ಚಿಮ ಬಂಗಾಳದ ಖರಗ್‍'ಪುರದಲ್ಲಿ ಭಾಷಣ ಮಾಡುವ ವೇಳೆ ಆಜಾನ್ ಧ್ವನಿ ಕೇಳಿಸಿದಾಗಲೂ ಪ್ರಧಾನಿ ತಮ್ಮ ಭಾಷಣವನ್ನು ನಿಲ್ಲಿಸಿ ಮೌನ ವಹಿಸಿದ್ದರು. ಆಗ ಮೋದಿ, ಯಾರದೇ ಪ್ರಾರ್ಥನೆಯಾಗಲಿ ನಡುವೆ ಅಡ್ಡಿಪಡಿಸುವುದು ನನಗೆ ಇಷ್ಟವಿಲ್ಲ. ಹಾಗಾಗಿ ಭಾಷಣವನ್ನು ನಡುವೆ ನಿಲ್ಲಿಸಬೇಕಾಯಿತು ಎಂದಿದ್ದರು. ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ ಸೌರಾಷ್ಟ್ರ ಕ್ಷೇತ್ರದಲ್ಲಿ ಮೋದಿ ರ್ಯಾಲಿಯನ್ನು ಉದ್ದೇಶಿಸಿ ಭಾಷಣ ಮಾಡುವಾಗ ಈ ಘಟನೆ ನಡೆದಿದೆ.

Follow Us:
Download App:
  • android
  • ios