ಸಂಸತ್ತು ಕಲಾಪಗಳಲ್ಲಿ ಗೈರು ಹಾಜರಾತಿಯನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ಮೋದಿ ಬಿಜೆಪಿ ಸಂಸದರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ. ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ನೀವಿದನ್ನು ಲಘವಾಗಿ ಪರಿಗಣಿಸುವಂತಿಲ್ಲ, ಎಂದು ಮಳೆಗಾಲ ಅಧಿವೇಶನ ಆರಂಭದಲ್ಲೂ ಪಕ್ಷದ ಸಂಸದೀಯ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಗೈರುಹಾಜರಾತಿ ಬಗ್ಗೆ ಸಂಸದರ ವಿರುದ್ಧ ಗರಂ ಆಗಿದ್ದರು ಎನ್ನಲಾಗಿದೆ.

ನವದೆಹಲಿ: ಸಂಸತ್ತು ಕಲಾಪಗಳಲ್ಲಿ ಗೈರು ಹಾಜರಾತಿಯನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ಮೋದಿ ಬಿಜೆಪಿ ಸಂಸದರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ನೀವಿದನ್ನು ಲಘವಾಗಿ ಪರಿಗಣಿಸುವಂತಿಲ್ಲ, ಎಂದು ಮಳೆಗಾಲ ಅಧಿವೇಶನ ಆರಂಭದಲ್ಲೂ ಪಕ್ಷದ ಸಂಸದೀಯ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಗೈರುಹಾಜರಾತಿ ಬಗ್ಗೆ ಸಂಸದರ ವಿರುದ್ಧ ಗರಂ ಆಗಿದ್ದರು ಎನ್ನಲಾಗಿದೆ.

ನೀವು ನಿಮಗಿಷ್ಟವಾದುದನ್ನು ಮಾಡಿ, ನಾನೇನು ಮಾಡ್ಬೇಕು ಅದನ್ನ 2019ರಲ್ಲಿ ಮಾಡ್ತೀನಿ. ಆಮೇಲೆ ನನ್ನನ್ನು ದೂಷಿಸಬೇಡಿ, ಎಂದು ಪ್ರಧಾನಿ ಸಂಸದರಿಗೆ ಎಚ್ಚರಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಮುಂಬರುವ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಪ್ರತಿಯೊಬ್ಬ ಸಂಸದರ ಸಾಧನೆಯನ್ನು ಪರಿಶೀಲಿಸಲಾಗುವುದು ಎಂದು ಅವರು ಹೇಳಿದ್ದಾರೆನ್ನಲಾಗಿದೆ.

ಕಳೆದ ಆ.01 ರಂದು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ಕುರಿತು ಮಸೂದೆಯನ್ನು ಕೇಂದ್ರವು ರಾಜ್ಯಸಭೆಯಲ್ಲಿ ಪರಿಚಯಿಸಿತ್ತು. ಆದರೆ ಆ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರದ ಸಚಿವರು ಸೇರಿದಂತೆ ಸುಮಾರು 30 ಸಂಸದರೇ ಗೈರು ಹಾಜರಾಗಿದ್ದರು.

ಕೇಂದ್ರ ಸಚಿವ ವಿಜಯ್ ಗಓಯಲ್, ನಿರ್ಮಲಾ ಸೀತರಾಮನ್, ಸ್ಮೃತಿ ಇರಾನಿ., ರವಿಶಂಕರ್ ಪ್ರಸಾದ್, ಧರ್ಮೇಂದ್ರ ಪ್ರಧಾನ್, ಪಿಯುಶ್ ಗೋಯಲ್, ಎಂಜೆ ಅಕ್ಬರ್ ಹಾಗೂ ರಾಮದಾಸ್ ಅಥಾವಳೆ ಮುಂತಾದವರೇ ಕಲಾಪಗಳಿಗೆ ಗೈರು ಹಾಜರಾಗಿದ್ದರು.