ಮಹದಾಯಿ ಬಗ್ಗೆ ಮೋದಿಯೂ ಮಹಾಮೌನ

news | Sunday, February 4th, 2018
Suvarna Web Desk
Highlights
 • ಭರವಸೆ ದೂರದ ಮಾತು, ಮಹದಾಯಿ ಪ್ರಸ್ತಾಪನೇ ಇಲ್ಲದ ಮೋದಿ ಭಾಷಣ
 • ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರಕ್ಕೆ ಭಾಷಣ ಮೀಸಲಿಟ್ಟ ಮೋದಿ

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್  ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಮಹದಾಯಿ ಬಗ್ಗೆ  ಮೋದಿ ಮಹಾಮೌನ ವಹಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರಕ್ಕೆ ಭಾಷಣ ಮೀಸಲಿಟ್ಟ ಮೋದಿ,  ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರ, ಕಾಂಗ್ರೆಸ್ ಅಂದ್ರೆ ತುಷ್ಟೀಕರಣ ಎಂದು ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದಲ್ಲಿ ಬಿಸ್ಯುನೆಸ್ ಮಾಡುವುದು ಕಷ್ಟ, ಕೊಲೆ ಮಾಡುವುದು ಸುಲಭ; ರಾಜ್ಯದಲ್ಲಿ ಈಜ್ ಆಫ್ ಡುಯಿಂಗ್ ಬಿಸ್ಯುನೆಸ್​​ ಇಲ್ಲ, ಈಜ್ ಆಫ್ ಡುಯಿಂಗ್ ಮರ್ಡರ್​ ಇದೆ ಎಂದು ಕಾಂಗ್ರೆಸ್​​ ಸರ್ಕಾರದ ವಿರುದ್ಧ ಮೋದಿ ಗುಡುಗಿದ್ದಾರೆ.

ತ್ರಿವಳಿ ತಲಾಖ್ ವಿಧೇಯಕಕ್ಕೆ ಅಡ್ಡಿಪಡಿಸುವ ಮೂಲಕ, ಮುಸ್ಲಿಂ ಸಮುದಾಯದ ಬಡ ಮಹಿಳೆಯರ ಹಕ್ಕುಗಳಿಗೆ ಧಕ್ಕೆ ತರಲು ಕಾಂಗ್ರೆಸ್ ಯತ್ನಿಸಿದೆ ಎಂದು ಮೋದಿ ಹೇಳಿದ್ದಾರೆ.

ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯನ್ನು ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿದೆ. ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರ ಕೊಟ್ಟಿರುವುದು 846 ಕೋಟಿ ರೂ, ಆದರೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಬಳಸಿರುವುದು 180 ಕೋಟಿ ಮಾತ್ರ;ಇನ್ನುಳಿದ ಕೇಂದ್ರದ ಹಣ ರಾಜ್ಯ ಸರ್ಕಾರದ ಖಜಾನೆಯಲ್ಲೇ ಇದೆ ದು ಮೋದಿ ವಾಗ್ದಾಳಿ ನಡೆಸಿದ್ದಾರೆ.

ಬಡವರಿಗೆ ಮನೆ ಕಟ್ಟಿಕೊಡುವ ಯೋಜನೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿದೆ.  ಇದು ಕಾಂಗ್ರೆಸ್ ಸರ್ಕಾರದ ಉದಾಸೀನಕ್ಕೆ ಸಾಕ್ಷಿ. ಈವರೆಗೂ 38 ಸಾವಿರ ಮನೆಗಳನ್ನು ಮಾತ್ರ ಕಟ್ಟಿರುವ ರಾಜ್ಯ ಸರ್ಕಾರ, 2 ಲಕ್ಷ ಮನೆಗಳ ನಿರ್ಮಾಣಕ್ಕೆ ಕೆಲಸವೇ ಆರಂಭಿಸಿಲ್ಲ ದು ಹೇಳಿದ್ದಾರೆ.

10% ಸರ್ಕಾರ:

ಸರ್ಕಾರದ ಪ್ರತಿ ಯೋಜನೆಗಳಲ್ಲಿ ಕಮಿಷನ್ ಪಡೆಯುವ ಸರ್ಕಾರವೆಂದು ಬಣ್ಣಿಸಿದ ಮೋದಿ, ಇದು 10 ಪರ್ಸೆಂಟ್ ಸರ್ಕಾರ, ಪರ್ಸಂಟೇಜ್ ನೀಡದ ಹೊರತು ಯಾವುದೇ ಕೆಲಸವೇ ಆಗಲ್ಲವೆಂದು ವ್ಯಂಗ್ಯವಾಡಿದ್ದಾರೆ.

ಸ್ಟೀಲ್ ಬ್ರಿಡ್ಜ್ ಹೆಸರಿನಲ್ಲಿ ಷಡ್ಯಂತ್ರ:

ಸ್ಟೀಲ್ ಬ್ರಿಡ್ಜ್ ಹೆಸರಿನಲ್ಲಿ ಕೋಟ್ಯಂತರ ರೂ. ಆಟ ಆಡಲು ಕರ್ನಾಟಕ ಸರ್ಕಾರದಲ್ಲಿನ ಕೆಲವರಿಂದ ಷಡ್ಯಂತ್ರ ನಡೆದಿತ್ತು ಎಂದು ಆರೋಪಿಸಿದ ಮೋದಿ, ಕರ್ನಾಟಕದಲ್ಲಿ ಬಿಲ್ಡರ್ ಮಾಫಿಯಾ, ಡೀಲ್ ಮಾಫಿಯಾ, ಮರಳು ಮಾಫಿಯಾಗಳ ನಂಗಾನಾಚ್ ನಡೆಯುತ್ತಿದೆ ಎಂದು ಟೀಕಿಸಿದ್ದಾರೆ.

ಕೊನೆಯಲ್ಲೂ ಕನ್ನಡದಲ್ಲಿ ಮೋದಿ ಭಾಷಣ, ಕಾಂಗ್ರೆಸ್’ನ ಕೆಸರಿನಿಂದಲೇ ನೂರಾರು ಕಮಲ ಅರಳಲಿವೆ, ಕರ್ನಾಟಕದಲ್ಲೂ ಬಿಜೆಪಿ ಅಭೂತಪೂರ್ವ ಜಯಗಳಿಸಲಿದೆ ಎಂಬ ವಿಶ್ವಾಸ ನನಗೆ ಇದೆ ಎಂದು ಹೇಳಿದ್ದಾರೆ.

PTO ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪ:

 ಪರಿವರ್ತನಾ ಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, PTO ಬಗ್ಗೆ ಪ್ರಸ್ತಾಪಿಸಿದ್ದಾರೆ.

ಆಲೂಗಡ್ಡೆ,(Potato) ಟೊಮ್ಯಾಟೊ (Tomato), ಈರುಳ್ಳಿ (Onion) ಬೆಳೆಗಾರರ ರಕ್ಷಣೆಗೆ ‘ಆಪರೇಷನ್ ಗ್ರೀನ್’ ಯೋಜನೆ ಜಾರಿಗೆ ತಂದಿರುವುದಾಗಿ ಮೋದಿ ಹೇಳಿದ್ದಾರೆ.

"ರೈತರಿಗಾಗಿ ಬಿಎಸ್ ವೈ ಸಿಎಂ ಆಗಬೇಕು"

ರೈತರ ಮಗ ಬಿ.ಎಸ್.ಯಡಿಯೂರಪ್ಪ ಸಿಎಂ ಆದರೆ ರಾಜ್ಯದಲ್ಲಿ ಪ್ರಗತಿಯಾಗಲಿದೆ. ರೈತರಿಗೆ ಹಲವು ಯೋಜನೆಗಳನ್ನು ನೀಡಲು ಯಡಿಯೂರಪ್ಪ ಸಿಎಂ ಆಗಬೇಕು ಎಂದು ಮೋದಿ ಹೇಳಿದ್ದಾರೆ.

 

 

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk