Asianet Suvarna News Asianet Suvarna News

ಕರ್ನಾಟಕ ರಾಜ್ಯೋತ್ಸವಕ್ಕೆ ಕನ್ನಡದಲ್ಲಿ ಶುಭಕೋರಿ ಪ್ರಧಾನಿ ಮಾಡಿದ ಟ್ವೀಟ್'ಗೆ ಸಖತ್ ರೆಸ್ಪಾನ್ಸ್

ಮೋದಿ ಮಾಡಿದ ಈ ಟ್ವೀಟ್'ಗೆ ಭರ್ಜರಿ ಪ್ರತಿಕ್ರಿಯೆ ಬಂದಿದೆ. ಅವರ ಈ ಟ್ವೀಟು ಸುಮಾರು 3 ಸಾವಿರಕ್ಕಿಂತ ಹೆಚ್ಚು ಲೈಕ್ ಕಂಡಿದೆ ಹಾಗು ಸುಮಾರು 2 ಸಾವಿರದಷ್ಟು ಬಾರಿ ರೀಟ್ವೀಟ್ ಆಗಿದೆ.

pm modi sends wishes for kannada rajyotsava in kannada language

ನವದೆಹಲಿ(ನ. 01): ಕರ್ನಾಟಕ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಹಾರೈಸಿ ಟ್ವೀಟ್ ಮಾಡಿದ್ದಾರೆ. ದೇಶದ ಪ್ರಗತಿಗೆ ಕರ್ನಾಟಕ ನೀಡಿರುವ ಕೊಡುಗೆಯನ್ನು ಪ್ರಧಾನಿ ತಮ್ಮ ಟ್ವೀಟ್'ನಲ್ಲಿ ಪ್ರಸ್ತಾಪಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷವೆಂದರೆ, ಮೋದಿಯವರ ಟ್ವಿಟ್ಟರ್ ಹ್ಯಾಂಡಲ್'ನಲ್ಲಿ ಕನ್ನಡದ ಅಕ್ಷರಗಳಲ್ಲೇ ಶುಭ ಕೋರಿರುವುದು ವಿಶೇಷ.

"ಕರ್ನಾಟಕ ಬಹಳ ಸುಂದರ ರಾಜ್ಯವಾಗಿದ್ದು, ಭಾರತದ ಪ್ರಗತಿಗೆ ಉತ್ತಮ ಕೊಡುಗೆ ನೀಡಿದೆ. ಕರ್ನಾಟಕ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ರಾಜ್ಯದ ಜನತೆಗೆ ನನ್ನ ಶುಭಾಶಯಗಳು" ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಮೋದಿ ಮಾಡಿದ ಈ ಟ್ವೀಟ್'ಗೆ ಭರ್ಜರಿ ಪ್ರತಿಕ್ರಿಯೆ ಬಂದಿದೆ. ಈ ಸುದ್ದಿ ಬರೆಯುವ ವೇಳೆ ಅವರ ಈ ಟ್ವೀಟು ಸುಮಾರು 3 ಸಾವಿರಕ್ಕಿಂತ ಹೆಚ್ಚು ಲೈಕ್ ಕಂಡಿದೆ ಹಾಗು ಸುಮಾರು 2 ಸಾವಿರದಷ್ಟು ಬಾರಿ ರೀಟ್ವೀಟ್ ಆಗಿದೆ.

ಕನ್ನಡವೇ ಮುಂದು:
ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟ್ಟರ್ ಅಕೌಂಟ್'ನಿಂದ ಇಂದು ವಿವಿಧ ರಾಜ್ಯಗಳ ಏಕೀಕರಣದ ದಿನಕ್ಕೆ ಶುಭ ಕೋರಿದ್ದಾರೆ. ಕರ್ನಾಟಕ, ಕೇರಳ, ಮಧ್ಯಪ್ರದೇಶ, ಛತ್ತೀಸ್'ಗಢ, ಹರಿಯಾಣ ಮತ್ತು ಪಂಜಾಬ್'ನ ರಾಜ್ಯೋತ್ಸವಗಳಿಗೆ ಬೆಸ್ಟ್ ವಿಶಸ್ ತಿಳಿಸಿದ್ದಾರೆ. ಎಲ್ಲಾ ರಾಜ್ಯಗಳಿಗೆ ಅವುಗಳದ್ದೇ ಭಾಷೆಯಲ್ಲಿ ಪ್ರಧಾನಿ ವಿಶ್ ಮಾಡಿದ್ದಾರೆ. ಆದರೆ, ಕನ್ನಡದಲ್ಲಿ ಮಾಡಿದ ಟ್ವೀಟ್'ಗೆ ಅತೀ ಹೆಚ್ಚು ರೆಸ್ಪಾನ್ಸ್ ಸಿಕ್ಕಿದೆ.

 

Follow Us:
Download App:
  • android
  • ios