ನವದೆಹಲಿ(ಮಾ.09): ಭಾರತೀಯ ರಕ್ತ ಹೊಂದಿರುವವರು ಯಾರೂ ಬಾಲಕೋಟ್ ವೈಮಾನಿಕ ದಾಳಿಯ ಬಗ್ಗೆ ಅನುಮಾನ ವ್ಯಕ್ತಪಡಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ನೊಯ್ಡಾದಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಉಗ್ರರನ್ನು ಮಟ್ಟಹಾಕಲು ಭಾರತ ನಮ್ಮ ಅವಧಿಯಲ್ಲಿ ಹೊಸ ನೀತಿ ಅನುಸರಿಸುತ್ತಿದೆ ಎಂದು ಹೇಳಿದರು.

ಆದರೆ ಕೆಲವರು ಬಾಲಾಕೋಟ್ ದಾಳಿಯ ಸಾಕ್ಷಿ ಕೇಳುತ್ತಿದ್ದು, ಇದು ಭಾರತೀಯ ಸಶಸ್ತ್ರ ಪಡೆಗಳಿಗೆ ಮಾಡಿದ ಅವಮಾನ ಎಂದು ಮೋದಿ ಗುಡುಗಿದರು. ಭಾರತೀಯ ರಕ್ತ ಹೊಂದಿರುವವರು ಸೇನೆಯಿಂದ ಸಾಕ್ಷಿ ಕೇಳುವುದಿಲ್ಲ ಎಂದು ಪ್ರಧಾನಿ ವಿಪಕ್ಷಗಳನ್ನು ಕಿಚಾಯಿಸಿದರು.

ಮುಂಬೈ ದಾಳಿಯ ನಂತರ ನಮ್ಮ ಸೇನಾಪಡೆಗಳು ಉಗ್ರರ ವಿರುದ್ಧ ಪ್ರತೀಕಾರಕ್ಕೆ ಸಿದ್ಧವಾಗಿದ್ದವು. ಆದರೆ ಹಿಂದಿನ ಸರ್ಕಾರ ಅದಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ ಸೇನಾಪಡೆಗಳು ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಮೋದಿ ನುಡಿದರು.