ರಾಜ್ಯವನ್ನು ಲೂಟಿ ಮಾಡಿದ ಎರಡು ಕುಟುಂಬಗಳು (ಮುಲಾಯಂ-ಗಾಂಧಿ ಕುಟುಂಬ) ಈಗ ಒಂದಾಗಿವೆ. ಇವರ ಬಗ್ಗೆ ಎಚ್ಚರಿಕೆ ಇರಲಿ ಎಂದು ಮತದಾರರನ್ನು ಎಸ್‌ಪಿ-ಕಾಂಗ್ರೆಸ್‌ ಮೈತ್ರಿ ಬಗ್ಗೆ ಮೋದಿ ಎಚ್ಚರಿಸಿದರು. 

ಬಿಜ್ನೋರ್(ಫೆ.11): ರಾಜಕಾರಣಿಗಳಲ್ಲಿ ಅತಿ ಹೆಚ್ಚು ಜೋಕ್‌ಗೆ ಒಳಗಾಗುವ ವ್ಯಕ್ತಿ ಎಂದರೆ ರಾಹುಲ್‌ ಗಾಂಧಿ. ಏಕೆಂದರೆ ಅವರಲ್ಲಿ ಅಷ್ಟೊಂದು ಬಾಲಿಶತನವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್‌ ಹೆಸರು ಪ್ರಸ್ತಾಪಿಸದೇ ವ್ಯಂಗ್ಯ ವಾಡಿದ್ದಾರೆ.
ಶುಕ್ರವಾರ ಉತ್ತರ ಪ್ರದೇಶದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ರಾಹುಲ್‌ ಹೆಸರನ್ನು ಗೂಗಲ್‌'ಗೆ ಹಾಕಿ ನೋಡಿ. ಆಗ ಅವರ ಹೆಸರಿನಲ್ಲಿ ಅತ್ಯಧಿಕ ಜೋಕುಗಳು ಲಭಿಸುತ್ತವೆ ಎಂದು ಹೇಳಿದರು.
ರಾಜ್ಯವನ್ನು ಲೂಟಿ ಮಾಡಿದ ಎರಡು ಕುಟುಂಬಗಳು (ಮುಲಾಯಂ-ಗಾಂಧಿ ಕುಟುಂಬ) ಈಗ ಒಂದಾಗಿವೆ. ಇವರ ಬಗ್ಗೆ ಎಚ್ಚರಿಕೆ ಇರಲಿ ಎಂದು ಮತದಾರರನ್ನು ಎಸ್‌ಪಿ-ಕಾಂಗ್ರೆಸ್‌ ಮೈತ್ರಿ ಬಗ್ಗೆ ಮೋದಿ ಎಚ್ಚರಿಸಿದರು. 

ಬಿಜೆಪಿ, ಬಿಎಸ್ಪಿ ದೋಸ್ತಿ- ಅಖಿಲೇಶ್‌:

ಪೀಲಿಭೀತ್‌'ನಲ್ಲಿ ಎಸ್‌ಪಿ ಸಮಾವೇಶದಲ್ಲಿ ಸಿಎಂ ಅಖಿಲೇಶ್‌ ಯಾದವ್‌ ಮಾತನಾಡಿ, ‘ಬಿಜೆಪಿ ಅಧಿಕಾರಕ್ಕೆ ಏರಲು ಮತಗಳನ್ನು ವಿಭಜನೆಗೆ ಬಿಎಸ್‌ಪಿ ಸಹಕರಿಸುತ್ತಿದೆ. ಹೀಗಾಗಿ ಮತದಾರರು ಎಸ್‌ಪಿಗೇ ಮತ ನೀಡಬೇಕು' ಎಂದು ಕರೆ ನೀಡಿದರು.