ಗ್ರಾಮೀಣ ಮಹಿಳೆಯರ ಅಭಿವೃದ್ಧಿ ಮಂತ್ರ ಪಠಿಸಿದ ಪ್ರಧಾನಿ ಮೋದಿ

First Published 25, Feb 2018, 4:00 PM IST
PM Modi says India moving from women devt to women led devt
Highlights

ಇಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಹಿಳಾ ಅಭಿವೃದ್ಧಿ ಮಂತ್ರವನ್ನು ಪಠಿಸಿದ್ದಾರೆ.

ನವದೆಹಲಿ : ಇಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಹಿಳಾ ಅಭಿವೃದ್ಧಿ ಮಂತ್ರವನ್ನು ಪಠಿಸಿದ್ದಾರೆ.

ಇನ್ನೇನು ಮಹಿಳಾ ದಿನಾಚರಣೆಗೆ ಕೆಲವೇ ದಿನಗಳು ಬಾಕಿ ಇದ್ದು ಈ ಬಾರಿಯ ಮನ್ ಕಿ ಬಾತ್’ನಲ್ಲಿ ಪ್ರಧಾನಿ  ಮಹಿಳಾ ಅಭಿವೃದ್ಧಿ ಕುರಿತಾಗಿ ಪ್ರಸ್ತಾಪಿಸಿದ್ದಾರೆ.

ಇಂದು ಮಹಿಳೆಯರ ಅಭಿವೃದ್ಧಿಯಾಗಬೇಕು. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾಲು ಸರಿಸಮನಾಗಿರಬೇಕು ಎನ್ನುವ ಕನಸು ನನಸಾಗಬೇಕು ಎಂದು ಪ್ರಧಾನಿ ತಿಳಿಸಿದ್ದಾರೆ.

ಅಲ್ಲದೇ ಮಹಿಳೆಯರು ತಮ್ಮ ಆದಾಯವನ್ನು ತಾವೇ ಗಳಿಸಿಕೊಳ್ಳಲು ಹೊಸದಾಗಿ ಆರಂಭವಾಗುತ್ತಿರುವ ಗೋಬರ್ ಧನ್ ಯೋಜನೆಯಲ್ಲಿ ಪಾಲ್ಗೊಂಡು ಹೆಚ್ಚು ಆದಾಯವನ್ನು ಗಳಿಸಿಕೊಂಡು ಆದಾಯದ ಮೂಲವನ್ನು ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ.

ಇದು ಗ್ರಾಮೀಣ ಭಾರತದ ಮಹಿಳೆಯರನ್ನು ಆದಾಯದ ದೃಷ್ಟಿಯಿಂದ ಹೆಚ್ಚು ಬಲಪಡಿಸಲು ಅನುಕೂಲಕಾರಿಯಾಗುತ್ತದೆ. ಅಲ್ಲದೇ ಗೋಬರ್ ಧನ್ ಯೋಜನೆಯು ಹಳ್ಳಿಗಳನ್ನು ಸ್ವಚ್ಛಗೊಳಿಸಿ, ಆದಾಯವನ್ನು ವೃದ್ಧಿಸಿಕೊಳ್ಳಲೂ ಕೂಡ ಸಹಕಾರಿಯಾಗುತ್ತದೆ ಎಂದು ಪ್ರಧಾನಿ ಈ ವೇಳೆ ಪ್ರಸ್ತಾಪಿಸಿದ್ದಾರೆ.

loader