ಮೋದಿ ಆಪ್ತ ಎಂದೇ ಕರೆಸಿಕೊಳ್ಳುತ್ತಿದ್ದರು ಜಗದೀಶ್ ಥಕ್ಕರ್ | ಮೋದಿ ಅವರ ಮಾಧ್ಯಮ ಮತ್ತು ಸೋಷಿಯಲ್ ಮೀಡಿಯಾ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು | 

ನವದೆಹಲಿ (ಡಿ. 11):  ಮೋದಿ ಅವರ ಮಾಧ್ಯಮ ಮತ್ತು ಸೋಷಿಯಲ್ ಮೀಡಿಯಾ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದ ಜಗದೀಶ್ ಥಕ್ಕರ್ ನಿನ್ನೆ ನಿಧನರಾಗಿದ್ದಾರೆ. ಇದು ಪ್ರಧಾನಿಗೆ ಸ್ವಲ್ಪ ಶಾಕ್ ತಂದಿದೆ.

Scroll to load tweet…
Scroll to load tweet…

ಉಳಿದವರಂತೆ ಪದೇ ಪದೇ ಪತ್ರಕರ್ತರನ್ನು ಭೇಟಿ ಆಗದೆ ಕೇವಲ ಫೋನ್‌ನಲ್ಲಿ ಮಾತ್ರ ಸಂಪರ್ಕದಲ್ಲಿರುತ್ತಿದ್ದ ಜಗದೀಶ್ ಅವರು ಮೋದಿ ಜೊತೆಗೆ 2001 ರಿಂದಲೂ ಇದ್ದರು. ಮೋದಿ ಸಾಹೇಬರು ಪ್ರೀತಿಯಿಂದ ಜಗದೀಶ್ ಭಾಯಿ ಎಂದು ಕರೆಯುತ್ತಿದ್ದ ಪ್ರಧಾನಿಯ ಮಾಧ್ಯಮ ಸಲಹೆಗಾರ ಕಳೆದ ನಾಲ್ಕೂವರೆ ವರ್ಷಗಳಲ್ಲಿ ದಿಲ್ಲಿಯಲ್ಲಿ ಪತ್ರಕರ್ತರನ್ನು ಭೇಟಿಯಾಗಿದ್ದು ಅಪರೂಪ. ಆದರೆ ಮೋದಿಯವರ ಸುದ್ದಿಗಳು ಪ್ರಾದೇಶಿಕ ಮಾಧ್ಯಮಗಳಲ್ಲಿ ಕೂಡ ಮಿಸ್ ಆಗದಂತೆ ನೋಡಿಕೊಳ್ಳುತ್ತಿದ್ದರು. ಇದಕ್ಕೂ ಮುನ್ನ ಇವರು ಗುಜರಾತಿನ 9 ಮುಖ್ಯಮಂತ್ರಿಗಳಿಗೆ ಪಿಆರ್‌ಒ ಆಗಿದ್ದರು.

-ಪ್ರಶಾಂತ್ ನಾತು , ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ