ಬಿಹಾರವನ್ನು ಸಂಪೂರ್ಣವಾಗಿ ಮದ್ಯಮುಕ್ತಗೊಳಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ನವದೆಹಲಿ (ಜ.05): ಬಿಹಾರವನ್ನು ಸಂಪೂರ್ಣವಾಗಿ ಮದ್ಯಮುಕ್ತಗೊಳಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಆಲ್ಕೋಹಾಲ್ ನಿಂದ ಮುಂದಿನ ಜನಾಂಗವನ್ನು ರಕ್ಷಿಸಲು ಇಂತದ್ದೊಂದು ದಿಟ್ಟ ನಿರ್ಧಾರ ತೆಗೆದುಕೊಂಡ ನಿತೀಶ್ ಕುಮಾರ್ ರನ್ನು ಅಭಿನಂದಿಸಲು ಬಯಸುತ್ತೇನೆಂದು ಮೋದಿ ಹೇಳಿದ್ದಾರೆ.

ಸಿಖ್ಖರ 10 ನೇ ಗುರು ಗೋವಿಂದ್ ಸಿಂಗರ 350 ನೇ ಜನ್ಮಜಯಂತಿ ಸಮಾರಂಭದಲ್ಲಿ ನಿತೀಶ್ ಕುಮಾರ್ ಜೊತೆ ವೇದಿಕೆ ಹಂಚಿಕೊಂಡ ಮೋದಿ ತಮ್ಮ ಭಾಷಣದ ವೇಳೆ ನಿತೀಶ್ ಕುಮಾರ್ ಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಕೇಂದ್ರ ಸಚಿವರಾದ ರವಿ ಶಂಕರ್ ಪ್ರಸಾದ್ ಮತ್ತು ರಾಮ್ ವಿಲಾಸ್ ಪಾಸ್ವಾನ್ ಉಪಸ್ಥಿತರಿದ್ದರು.

ಇದು ಕೇವಲ ನಿತೀಶ್ ಕುಮಾರ್ ರವರ ಅಥವಾ ರಾಜಕೀಯ ಪಕ್ಷಗಳ ಕರ್ತವ್ಯವಲ್ಲ. ರಾಜ್ಯದ ಅಭಿವೃದ್ಧಿ ಯಶಸ್ಸಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮೋದಿ ಹೇಳಿದ್ದಾರೆ.