ವಿಶ್ವ ಮಹಿಳಾ ದಿನವನ್ನು ಇಂದು ಆಚರಣೆ ಮಾಡುತ್ತಿದ್ದು, ಈ ವೇಳೆ ದೇಶದ ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ಈ ವೇಳೆ ಕುನ್ವಾರ್ ಬಾಯಿ ಅವರನ್ನು ನೆನೆಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಅವರು ನನಗೆ ಸ್ಪೂರ್ತಿ ಎಂದು ಹೇಳಿದ್ದಾರೆ.

ನವದೆಹಲಿ : ವಿಶ್ವ ಮಹಿಳಾ ದಿನವನ್ನು ಇಂದು ಆಚರಣೆ ಮಾಡುತ್ತಿದ್ದು, ಈ ವೇಳೆ ದೇಶದ ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ಈ ವೇಳೆ ಕುನ್ವಾರ್ ಬಾಯಿ ಅವರನ್ನು ನೆನೆಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ಅವರು ನನಗೆ ಸ್ಪೂರ್ತಿ ಎಂದು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಛತ್ತೀಸ್’ ಮೂಲದ ಕುನ್ವಾರ್ ಬಾಯಿ ತಮ್ಮ 106ನೇ ವರ್ಷಕ್ಕೆ ಮೃತಪಟ್ಟಿದ್ದರು. ಅವರು ತಮ್ಮ ಕುರಿಗಳನ್ನು ಮಾರಿ ಶೌಚಾಲಯವನ್ನು ನಿರ್ಮಾಣ ಮಾಡಲು ಕೊಡುಗೆ ನೀಡಿದ್ದರು.

ಈ ಮೂಲಕ ಸ್ವಚ್ಛ ಭಾರತ ಅಭಿಯಾನದಲ್ಲಿ ಅವರು ಮಹತ್ವದ ಪಾತ್ರವೊಂದನ್ನು ವಹಿಸಿದ್ದು, ಮಹಿಳಾ ದಿನಾಚರಣೆಯಂದು ಅವರನ್ನು ಪ್ರಧಾನಿ ನೆನೆಸಿಕೊಂಡಿದ್ದಾರೆ. ಟ್ವೀಟ್ ಮಾಡುವ ಮೂಲಕ ಕುನ್ವರ್ ಬಾಯಿ ಅವರಿಗೆ ಗೌರವ ನೀಡಿದ್ದಾರೆ.

Scroll to load tweet…