ಉತ್ತರ ಪ್ರದೇಶ ಚುನಾವಣಾ ರ್ಯಾಲಿಯನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಕ್ಷೇತ್ರ ವಾರಣಾಸಿಯ ಕಾಲಭೈರವ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಸಮಾಪ್ತಿಗೊಳಿಸಿದರು.
ನವದೆಹಲಿ (ಮಾ.04): ಉತ್ತರ ಪ್ರದೇಶ ಚುನಾವಣಾ ರ್ಯಾಲಿಯನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಕ್ಷೇತ್ರ ವಾರಣಾಸಿಯ ಕಾಲಭೈರವ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಸಮಾಪ್ತಿಗೊಳಿಸಿದರು.
ಬನಾರಸ್ ಹಿಂದೂ ವಿವಿಯ ಮುಖ್ಯದ್ವಾರದಿಂದ ಆರಂಭವಾದ ರೋಡ್ ಶೋ ವಾರಣಾಸಿಯ ಕಾಲಭೈರವ ದೇಗುಲದಲ್ಲಿ ಮುಕ್ತಾಯಗೊಂಡಿತು. ನೂರಾರು ಮಹಿಳೆಯರು, ಪುರುಷರು ಕೇಸರಿ ವಸ್ತ್ರವನ್ನು ಧರಿಸಿ, ಬಿಜೆಪಿ ಧ್ವಜವನ್ನು ಹಿಡಿದು ಮೋದಿ ಪರ ಘೋಷಣೆ ಕೂಗಿದರು.
ಹಿಂದೂ ಬನಾರಸ್ ವಿವಿಯಿಂದ ವಾರಣಾಸಿಗೆ ವಿಶೇಷ ಹೆಲಿಕ್ಯಾಪ್ಟರ್ ನಲ್ಲಿ ಆಗಮಿಸಿದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಿತರ ಹಿರಿಯ ಮುಖಂಡರು ಪ್ರಧಾನಿಯನ್ನು ಸ್ವಾಗತಿಸಿದರು. ಬಳಿಕ ಸ್ವತಂತ್ರ ಹೋರಾಟಗಾರರಾಗಿದ್ದ ಪಂಡಿತ್ ಮದನ್ ಮೋಹನ್ ಮಾಳವೀಯ ಪುತ್ತಳಿಗೆ ನಮನ ಸಲ್ಲಿಸಿದರು.
ತಮ್ಮ ಕ್ಷೇತ್ರವಾದ ವಾರಣಾಸಿಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ, ಸರ್ಜಿಕಲ್ ದಾಳಿಯನ್ನು ಟೀಕಿಸಿದ್ದ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು. ಸರ್ಜಿಕಲ್ ಸ್ಟ್ರೈಕನ್ನು ಪ್ರಶ್ನಿಸಿದವರು ಜೌನ್ ಪುರ್ ಗೆ ಬನ್ನಿ. ಹುತಾತ್ಮ ಯೋಧರ ಕುಟುಂಬದವರನ್ನು ಮಾತಾಡಿಸಿ. ಸುಖಾಸುಮ್ಮನೆ ದೇಶದ ಭದ್ರತೆ ವಿಚಾರವನ್ನು ರಾಜಕೀಯಗೊಳಿಸಬೇಡಿ ಎಂದರು.
