ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ಮೊದಲ ಮನ್ ಕಿ ಬಾತ್ ಕಾರ್ಯಕ್ರಮವನ್ನು ಇಂದು ನಡೆಸಿದ್ದಾರೆ. ಈ ವೇಳೆ  ಮೈಸೂರಿನ ದರ್ಶನ್ ಎಂಬ ಯುವಕನ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ.
ಜನೌಷಧಿ ಕೇಂದ್ರದ ಬಗ್ಗೆ ದರ್ಶನ್ ಅನುಭವವನ್ನು ಪ್ರಧಾನಿ ಮೋದಿ ಅವರು ತಮ್ಮ ಮನದ ಮಾತು ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. 

ತಿಂಗಳಿಗೆ ತಂದೆಯ ಔಷಧಿಗಾಗಿ 6 ಸಾವಿರ ರೂ. ಖರ್ಚು ಮಾಡುತ್ತಿದ್ದ ದರ್ಶನ್ ಈಗ ಜನೌಷಧಿ ಕೇಂದ್ರದಿಂದ ಖರೀದಿಸಿ ಶೇ.75ರಷ್ಟು ಹಣ ಉಳಿತಾಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೇ ಜನೌಷಧಿ ಕೇಂದ್ರದ ಲಾಭದ ಬಗ್ಗೆಯೂ ಕೂಡ ಮನ್​ ಕೀ ಬಾತ್​ನಲ್ಲಿ ಪ್ರಸ್ತಾಪಿಸಿದ್ದಾರೆ.