ಈ ಯೋಜನೆಯಿಂದ 18 ಸಾವಿರ ಗ್ರಾಮಗಳಿಗೆ ವಿದ್ಯುತ್ ಸೌಲಭ್ಯ ಸಿಗಲಿದೆ,

ನವದೆಹಲಿ(ಸೆ.25): ಜನತೆಯನ್ನ ಕತ್ತಲಿನಿಂದ ಬೆಳಕಿನೆಡೆಗೆ ಸಾಗಿಸುವ ‘ಸೌಭಾಗ್ಯ’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಿಂದ ದೇಶದ ರೈತರಿಗೆ ಹಾಗೂ ಬಡವರಿಗೆ 24/7 ವಿದ್ಯುತ್ ದೊರಯಲಿದೆ. ದೇಶದಲ್ಲಿ ವಿದ್ಯುತ್ ಕ್ರಾಂತಿಗೆ ಈ ಯೋಜನೆ ನಾಂದಿ ಹಾಡಲಿದೆ

ಯೋಜನೆಯ ವಿವರಗಳು

  • ಸೌಭಾಗ್ಯಯೋಜನೆಯಡಿಪ್ರತಿಮನೆಗೂವಿದ್ಯುತ್
  • BPL ಕಾರ್ಡ್​ದಾರರಿಗೆಉಚಿತವಿದ್ಯುತ್
  • 2019 ಮಾರ್ಚ್​ 31ರೊಳಗೆನಿರಂತರವಿದ್ಯುತ್ಪೂರೈಕೆಗುರಿ
  • ಪ್ರದೇಶದ 4 ಕೋಟಿಮನೆಗಳಿಗೆವಿದ್ಯುತ್
  • 5 ಎಲ್​ಇಡಿಬಲ್ಬ್​, ಫ್ಯಾನ್, ಬ್ಯಾಟರಿವಿತರಣೆ
  • ವ್ಯವಸ್ಥೆಇಲ್ಲದಕಡೆ, ಸೋಲಾರ್ಅಳವಡಿಕೆ
  • 16 ಸಾವಿರದ 320 ಕೋಟಿವೆಚ್ಚದಯೋಜನೆ
  • ಸರ್ಕಾರದಿಂದಶೇ.70ರಷ್ಟುಬಂಡವಾಳಹೂಡಿಕೆ
  • 18 ಸಾವಿರಗ್ರಾಮಗಳಿಗೆವಿದ್ಯುತ್ಸೌಲಭ್ಯ
  • ಪೂರೈಕೆಶುಲ್ಕರಹಿತ

ಬಡವರಿಗಾಗಿ ಶ್ರಮಿಸುತ್ತಿದ್ದೇವೆ : ಮೋದಿ

ನಮ್ಮ ಸರ್ಕಾರ ಬಡವರ ಮನೆಗಳಿಗೆ ತೆರಳಿ ವಿದ್ಯುತ್ ನೀಡಲಿದೆ. ವಿದ್ಯುತ್ ನೀಡಲು ಯಾವುದೇ ಶುಲ್ಕ ತೆಗೆದುಕೊಳ್ಳುವುದಿಲ್ಲ, ಬಡರಿಗೆ ಸೌಭಾಗ್ಯ ನೀಡಲು ಸಂಕಲ್ಪ ಮಾಡಿದ್ದೇವೆ ಎಂದಿದ್ದಾರೆ. ಅಷ್ಟೇ ಅಲ್ಲದೇ ಈ ಯೋಜನೆಯಿಂದ 18 ಸಾವಿರ ಗ್ರಾಮಗಳಿಗೆ ವಿದ್ಯುತ್ ಸೌಲಭ್ಯ ಸಿಗಲಿದೆ, ಈಗಾಗಲೇ ಮುದ್ರಾ ಯೋಜನೆಯಲ್ಲಿ 9 ಕೋಟಿ ಜನರಿಗೆ 3.5 ಲಕ್ಷ ಕೋಟಿ ಸಾಲ ನೀಡಿದ್ದೇವೆ. 310 ರೂಪಾಯಿ ಇದ್ದ ಎಲ್​ಇಡಿ ಬಲ್ಬ್ ಬೆಲೆಯನ್ನ 40 ರೂ.ಗೆ ಇಳಿಸಿದ್ದೇವೆ, ನಮ್ಮ ಸರ್ಕಾರ ಪರಿಸರ ಸಂರಕ್ಷಣೆಗೆ ಕಟಿಬದ್ಧವಾಗಿದೆ. ವಿದ್ಯುತ್ ಕ್ಷೇತ್ರದಲ್ಲಿ ಭಾರೀ ಸುಧಾರಣೆಯಾಗಲಿದೆ ಎಂದಿದ್ದಾರೆ.