Asianet Suvarna News Asianet Suvarna News

ಪ್ರಧಾನಿ ಮೋದಿ ನಿಜವಾದ ಹಿಂದೂ ಅಲ್ಲ: ಕಾಂಗ್ರೆಸ್ ನಾಯಕನಿಂದ ಹೊಸ ವಿವಾದ

ಪ್ರಧಾನಿ ನರೇಂದ್ರ  ಮೋದಿ ನಿಜವಾದ ಹಿಂದೂ ಅಲ್ಲ.  ನಿಜವಾದ ಹಿಂದೂಗಳು ಭೇದ-ಭಾವ ಮಾಡುವುದಿಲ್ಲ ಎಂದು ಕಾಂಗ್ರೆಸ್​ ಹಿರಿಯ ನಾಯಕ ಕಪಿಲ್​ ಸಿಬಲ್​ ಹೇಳಿದ್ದಾರೆ. ರಾಹುಲ್ ಗಾಂಧಿ ಸೋಮನಾಥ ದೇಗುಲ ವಿವಾದಕ್ಕೆ ಪ್ರತಿಕ್ರಿಯೆ ಕೊಡಲು ಹೋಗಿ ಹೊಸ ವಿವಾದ ಸೃಷ್ಟಿಸಿದ್ದಾರೆ.

PM Modi is not Real Hindu Congress Leader Kapil Sibal raised a Controversy Statement

ನವದೆಹಲಿ (ನ.30): ಪ್ರಧಾನಿ ನರೇಂದ್ರ  ಮೋದಿ ನಿಜವಾದ ಹಿಂದೂ ಅಲ್ಲ.  ನಿಜವಾದ ಹಿಂದೂಗಳು ಭೇದ-ಭಾವ ಮಾಡುವುದಿಲ್ಲ ಎಂದು ಕಾಂಗ್ರೆಸ್​ ಹಿರಿಯ ನಾಯಕ ಕಪಿಲ್​ ಸಿಬಲ್​ ಹೇಳಿದ್ದಾರೆ. ರಾಹುಲ್ ಗಾಂಧಿ ಸೋಮನಾಥ ದೇಗುಲ ವಿವಾದಕ್ಕೆ ಪ್ರತಿಕ್ರಿಯೆ ಕೊಡಲು ಹೋಗಿ ಹೊಸ ವಿವಾದ ಸೃಷ್ಟಿಸಿದ್ದಾರೆ.

ನಿನ್ನೆ  ರಾಹುಲ್​ ಗಾಂಧಿ ಸೋಮನಾಥ್ ದೇಗುಲಕ್ಕೆ ಹೋದಾಗ ರಿಜಿಸ್ಟರ್ ಬುಕ್'ನಲ್ಲಿ ಹಿಂದೂಯೇತರ ಎಂದು ನಮೂದಿಸಿದ್ದರು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ  ಧರ್ಮ ಪ್ರಶ್ನಿಸಿದವರ ವಿರುದ್ಧ ಕಪಿಲ್​ ವಾಗ್ದಾಳಿ ನಡೆಸುತ್ತಾ, ಹಿಂದೂ ಧರ್ಮ ಆಚರಣೆಯನ್ನೇ ಬಿಟ್ಟಿರುವ ಪ್ರಧಾನಿ ಮೋದಿ ಹಿಂದುತ್ವದ ಬಗ್ಗೆ ವಾದಿಸುತ್ತಿದ್ದಾರೆ. ನಿಜವಾದ ಹಿಂದೂಗಳು ಈ ರೀತಿ ಭೇದ ಭಾವ ಮಾಡುವುದಿಲ್ಲ. ಪ್ರಧಾನಿ ಮೋದಿ ಎಷ್ಟು ಬಾರಿ ದೇವಸ್ಥಾನಕ್ಕೆ ಹೋಗಿದ್ದಾರೆ?  ಎಂದು ಕಪಿಲ್ ಸಿಬಲ್ ಟೀಕಿಸಿದ್ದಾರೆ.

Follow Us:
Download App:
  • android
  • ios