Asianet Suvarna News Asianet Suvarna News

ಮೋದಿಯವರು ಭಾರತದ 2 ನೇ ಮಹಾತ್ಮ ಗಾಂಧಿ ಎಂದು ವಿಜಯ್ ಗೋಯಲ್ ವರ್ಣನೆ

ಕೇಂದ್ರ ಕ್ರೀಡಾ ಸಚಿವ ವಿಜಯ್  ಗೋಯಲ್ ಪ್ರಧಾನಿ ನರೇಂದ್ರ ಮೋದಿಯನ್ನು  ಎರಡನೇ ಮಹಾತ್ಮ ಗಾಂಧಿಯೆಂದು ಕರೆದು ವಿವಾದಕ್ಕೆ ಎಡೆಯಾಗಿದ್ದಾರೆ.

PM Modi is India Second Mahatma Gandhi Says Minister Vijay Goel
  • Facebook
  • Twitter
  • Whatsapp

ನವದೆಹಲಿ (ಮೇ.27): ಕೇಂದ್ರ ಕ್ರೀಡಾ ಸಚಿವ ವಿಜಯ್  ಗೋಯಲ್ ಪ್ರಧಾನಿ ನರೇಂದ್ರ ಮೋದಿಯನ್ನು  ಎರಡನೇ ಮಹಾತ್ಮ ಗಾಂಧಿಯೆಂದು ಕರೆದು ವಿವಾದಕ್ಕೆ ಎಡೆಯಾಗಿದ್ದಾರೆ.

ಮೇಕಿಂಗ್ ಆಫ್ ಡೆವಲಪ್ಡ್ ಇಂಡಿಯಾ ಕಾರ್ಯಕ್ರಮದಲ್ಲಿ ವಿಜಯ್ ಗೋಯಲ್ ಮಾತನಾಡುತ್ತಾ, ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ‘ಮೋದಿಯವರನ್ನು ಮಾಜಿ ಪ್ರಧಾನಿಗಳಾಗಿದ್ದ ಜವಾಹರ್ ಲಾಲ್ ನೆಹರು, ಇಂದಿರಾಗಾಂಧಿಗೆ ಹೋಲಿಸಬಹುದು ಎಂದಿದ್ದರು. ಆದರೆ ನಾನು ಇನ್ನೂ ಒಂದು ಹೆಜ್ಜೆ ಮುಂದುವರೆದು ಮೋದಿಜಿ ಭಾರತದ ಎರಡನೇ ಮಹಾತ್ಮ ಗಾಂಧಿ ಎಂದು ಬಣ್ಣಿಸಿದ್ದಾರೆ.

ಯುಪಿಎ ಸರ್ಕಾರದ ಭ್ರಷ್ಟಾಚಾರ ಹಗರಣಗಳಿಂದ ಬೇಸತ್ತು ಹೋಗಿದ್ದ ದೇಶದ ಜನತೆ ಗುಜರಾತಿನಿಂದ ಮೋದಿಯವರನ್ನು ಕರೆದರು ಎಂದು ಗೋಯಲ್ ಹೇಳಿದರು.

ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ಹೆಸರನ್ನು ಹೇಳದೆ ಹೆಸರನ್ನು ಹೇಳದೇ ಮೋದಿಯವರ ಹಿಂದಿನ ಸರ್ಕಾರದಲ್ಲಿ ಭ್ರಷ್ಟಾಚಾರ, ಬೆಲೆಯೇರಿಕೆ, ಹಗರಣಗಳೇ ತುಂಬಿ ಹೋಗಿದ್ದವು. ಆಗಿನ ಪ್ರಧಾನಿಯವರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ಬೇರೆಯವರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ಹೇಳಿದರು.

Follow Us:
Download App:
  • android
  • ios