ಚೀನಾಕ್ಕೆ ಸಡ್ಡು ಹೊಡೆಯಲು ಪ್ರಧಾನಿ ನರೇಂದ್ರ ಮೋದಿ ರಾಜತಾಂತ್ರಿಕ ದಾಳ ಪ್ರಯೋಗಿಸಿದ್ದಾರೆ. 2018ರ ಗಣರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸುವಂತೆ ಆಗ್ನೇಯ ಏಷ್ಯಾ ದೇಶಗಳ ಒಕ್ಕೂಟ (ಆಸಿಯಾನ್)ದ 10 ದೇಶಗಳ ನಾಯಕರಿಗೆ ಆಹ್ವಾನ ನೀಡಿದ್ದಾರೆ.
ಮನಿಲಾ: ಚೀನಾಕ್ಕೆ ಸಡ್ಡು ಹೊಡೆಯಲು ಪ್ರಧಾನಿ ನರೇಂದ್ರ ಮೋದಿ ರಾಜತಾಂತ್ರಿಕ ದಾಳ ಪ್ರಯೋಗಿಸಿದ್ದಾರೆ. 2018ರ ಗಣರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸುವಂತೆ ಆಗ್ನೇಯ ಏಷ್ಯಾ ದೇಶಗಳ ಒಕ್ಕೂಟ (ಆಸಿಯಾನ್)ದ 10 ದೇಶಗಳ ನಾಯಕರಿಗೆ ಆಹ್ವಾನ ನೀಡಿದ್ದಾರೆ.
ಆಸಿಯಾನ್ ಶೃಂಗ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ, ‘ಪ್ರಾದೇಶಿಕ ಹಿತಾಸಕ್ತಿ ಮತ್ತು ಶಾಂತಿಯುತ ಅಭಿವೃದ್ಧಿಗೆ ಭಾರತ ಬೆಂಬಲ ನೀಡಲಿದೆ. 2018 ಜ.25ರಂದು ಭಾರತ ಆಸಿಯಾನ್ ವಿಶೇಷ ಸ್ಮರಣಾರ್ಥ ಶೃಂಗದಲ್ಲಿ ನಿಮ್ಮನ್ನು ಸ್ವಾಗತಿಸಲು ನಾನು ಉತ್ಸುಕನಾಗಿದ್ದೇನೆ.
69ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಆಸಿಯಾನ್ ರಾಷ್ಟ್ರಗಳ ನಾಯಕರನ್ನು ಸ್ವಾಗತಿಸಲು 125 ಕೋಟಿ ಭಾರತೀಯರು ಕಾತರರಾಗಿದ್ದಾರೆ. ಸಾಮಾನ್ಯ ಗುರಿ ಸಾಧಿಸಲು ನಾನು ನಿಮ್ಮೊಂದಿಗೆ ಕಾರ್ಯನಿರ್ವಹಿಸಲು ಬದ್ಧನಾಗಿದ್ದೇನೆ’ ಎಂದು ಹೇಳಿದರು.
ಆಸಿಯಾನ್‌ನಲ್ಲಿ ಥೈಲ್ಯಾಂಡ್, ವಿಯೆಟ್ನಾಂ, ಇಂಡೋನೇಷ್ಯಾ, ಮಲೇಷ್ಯಾ, ಪಿಲಿಪ್ಫೀನ್ಸ್, ಸಿಂಗಾಪುರ, ಮ್ಯಾನ್ಮಾರ್, ಕಾಂಬೋಡಿಯಾ, ಲಾವೋಸ್, ಬ್ರುನೈ ದೇಶಗಳಿವೆ
