Asianet Suvarna News Asianet Suvarna News

ಕೆಂಪುಕೋಟೆಯಲ್ಲಿ ದೇಶವನ್ನು ಉದ್ದೇಶಿಸಿ ಪ್ರಧಾನಿ ಭಾಷಣ

ದೇಶದಾದ್ಯಂತ 72ನೇ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡುತ್ತಿದ್ದು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. 

PM Modi Independence Day Speech At Red Fort
Author
Bengaluru, First Published Aug 15, 2018, 8:05 AM IST

ದೇಶದಾದ್ಯಂತ 72ನೇ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡುತ್ತಿದ್ದು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. 

 ಮೋದಿ ಭಾಷಣದ ಪ್ರಮುಖ ಅಂಶಗಳು

  • ಮೇರೆ ಪ್ಯಾರೇ ದೇಶ್ ವಾಸಿಯೋ..
  • ಈ ದಿನದ ಸೂರ್ಯೋದಯ ಹೊಸ ಉತ್ಸಾಹ, ಹೊಸ ಚೇತನ ತಂದಿದೆ
  • ನಮ್ಮ ದೇಶದಲ್ಲಿ 12 ವರ್ಷಕ್ಕೊಮ್ಮೆ ನೀಲಕುರಂಜಿ ಹೂವು ಅರಳುತ್ತದೆ
  • ನಮ್ಮ ಹಲವು ಪುತ್ರ, ಪುತ್ರಿಯರು ಎವರೆಸ್ಟ್ ಏರಿ ತ್ರಿವಣ ಧ್ವಜ ಹಾರಿಸಿದ್ದಾರೆ
  • ಅರಣ್ಯ ಭಾಗಗಳಲ್ಲಿ ವಾಸಿಸುವ ಮಕ್ಕಳು ಎವರಿಸ್ಟ್ ಏರಿ ಧ್ವಜ ಹಾರಿಸಿದ್ದಾರೆ
  • ಭಾರತ ಎಂದರೆ, ನಿಧಾನ ಯೋಜನೆಗಳ ರಾಷ್ಟ್ರ ಎಂದು ಪ್ರಪಂಚ ಕರೆಯುತ್ತಿತ್ತು
  • ಈಗ ಭಾರತ ವೇಗದ ಯೋಜನೆಗಳ ರಾಷ್ಟ್ರ ಎನ್ನುತ್ತಿದ್ದಾರೆ
  • ಬೇನಾಮಿ ಆಸ್ತಿಯ ಕಾನೂನು, ದಿವಾಳಿ ತಡೆ ಕಾನೂನು ಬರದಂತೆ ಯಾರು ತಡೆದಿದ್ದರು?
  • ಗಟ್ಟಿಯಾದ ನಿರ್ಧಾರ, ದೇಶದ ಜನರ ಬಗ್ಗೆ ಕಾಳಜಿ ಇದ್ದರೆ ಇಂಥ ನಿರ್ಧಾರಗಳಾಗುತ್ತವೆ
  • ನಮಗೆ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳುವ ತಾಕತ್ತಿದೆ
  • ಇಡೀ ಜಗತ್ತು ಭಾರತದತ್ತ ಆಸೆ ಮತ್ತು ಅಪೇಕ್ಷೆಗಳಿಂದ ನೋಡುತ್ತಿದೆ
  • 2014ಕ್ಕಿಂತ ಮುಂಚೆ ದೊಡ್ಡ ಆರ್ಥಿಕ ತಜ್ಞರು ಭಾರತದ ಬಗ್ಗೆ ಏನು ಮಾತನಾಡುತ್ತಿದ್ದರು?
  • ಭಾರತದ ಆರ್ಥಿಕತೆ ಅಪಾಯ ಅಂಚಿನಲ್ಲಿದೆ ಎನ್ನುತ್ತಿದ್ದರು
  • ಈಗ ಅದೇ ಆರ್ಥಿಕ ತಜ್ಞರು ಭಾರತದ ಆರ್ಥಿಕತೆಯ ಗುಣಗಾನ ಮಾಡುತ್ತಿದ್ದಾರೆ
  • ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸುವ ನಿರ್ಧಾರ ಇದಕ್ಕೊಂದು ಉದಾಹರಣೆ
  • ಜಿಎಸ್ಟಿ ಬೇಡ ಎನ್ನುವವರು ಯಾರೂ ಇರಲಿಲ್ಲ
  • ಜಿಎಸ್ಟಿ ಎಲ್ಲರಿಗೂ ಬೇಕಾಗಿತ್ತು, ಆದರೆ ಅಂತಿಮ ನಿರ್ಧಾರವನ್ನು ಯಾರೂ ತೆಗೆದುಕೊಂಡಿರಲಿಲ್ಲ
  • ದೇಶದ ವ್ಯಾಪಾರಿಗಳ ಸಹಕಾರದೊಂದಿಗೆ ಇಂದು ಜಿಎಸ್ಟಿ ಜಾರಿಯಾಗಿದೆ
  • ಸರ್ಜಿಕಲ್ ಸ್ಟ್ರೈಕ್ ಅನ್ನು ಮತ್ತೆ ನೆನಪಿಸಿದ ಪ್ರಧಾನಿ ಮೋದಿ
  • ಸಂಕಲ್ಪದೊಂದಿಗೆ ಸೈನಿಕ ಹೊರಟರೆ ಆತ ಯಶಸ್ವಿಯಾಗಿ ಸರ್ಜಿಕಲ್ ಸ್ಟ್ರೈಕ್ ಮುಗಿಸಿಕೊಂಡು ಬರುತ್ತಾನೆ
  • ಗುರಿ ದೊಡ್ಡದಾಗಿರಬೇಕು, ಇಲ್ಲದಿದ್ದರೆ ಸಾಧನೆ ಸಾಧ್ಯವಿಲ್ಲ
  • ಗುರಿ ಗಟ್ಟಿಯಾಗಿಲ್ಲದಿದ್ದರೆ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ನಿಧಾನಗೊಳ್ಳುತ್ತದೆ
  • ಅವೇ ಸರ್ಕಾರಿ ಕಚೇರಿಗಳು, ಫೈಲ್ಗಳು, ನಿರ್ಣಯ ತೆಗೆದುಕೊಳ್ಳುವ ಜನ
  • ಆದರೆ, ಕೆಲಸ ಮಾಡುವ ಕ್ಷಮತೆ ಮಾತ್ರ ಹೆಚ್ಚಾಗಿದೆ, ಅದರ ಪರಿಣಾಮವನ್ನು ದೇಶ ಈಗ ನೋಡುತ್ತಿದೆ
  • ಟ್ರ್ಯಾಕ್ಟರ್ನಿಂದ ಹಿಡಿದು ವಿಮಾನದವರೆಗೆ ಎಲ್ಲದರ ಖರೀದಿ ಹೆಚ್ಚಾಗಿರುವುದು ಇದೇ ಕಾಲಘಟ್ಟದಲ್ಲಿ
  • ಸ್ಟಾರ್ಟ್ಅಪ್ಗಳ ಪ್ರವಾಹ ಭಾರತದಲ್ಲಾಗಿದೆ
  • ನಿಂತು ಹೋಗಿದ್ದ 99 ನೀರಾವರಿ ಯೋಜನೆಗಳನ್ನು ಮತ್ತೆ ಆರಂಭಿಸಿದ್ದೇವೆ
  • ಎಲ್ಲ ಗ್ರಾಮಗಳಿಗೆ ವಿದ್ಯುತ್ ತಲುಪಿಸಲು 20 ವರ್ಷ ಬೇಕಾಗುತ್ತಿತ್ತು
  • ಎಲ್ಲ ಮನೆಗಳಿಗೆ ಎಲ್ಪಿಜಿ ಸಂಪರ್ಕ ಕಲ್ಪಿಸಲು100 ವರ್ಷ ಬೇಕಾಗುತ್ತಿತ್ತು
  • ಹಳ್ಳಿಗಳಿಗೆ ಇಂಟರ್ನೆಟ್ ತಲುಪಿಸಲು ಒಂದು ಪೀಳಿಗೆ ದಾಟಿ ಹೋಗುತ್ತಿತ್ತು
  • ಇದು 4 ವರ್ಷ ಸರ್ಕಾರದ ವೇಗಕ್ಕೆ ಸಾಕ್ಷಿ- ಬಿಜೆಪಿ ಸರ್ಕಾರದ ಸಾಧನೆಗಳನ್ನು ವಿವರಿಸಿದ ಮೋದಿ 
  • ಎಲ್ಲಿಂದ ನಾವು ಯಾತ್ರೆಯನ್ನು ಆರಂಭಿಸಿದೆವು ಎಂಬುದನ್ನು ನೋಡಬೇಕು
  • ಆಗ ಮಾತ್ರ ನಾವು ಎಲ್ಲಿಗೆ ಬಂದು ತಲುಪಿದ್ದೇವೆ ಎಂಬುದು ಗೊತ್ತಾಗುತ್ತದೆ
  • 2013ರ ವೇಗವನ್ನು ಮಾನದಂಡವನ್ನಾಗಿಟ್ಟುಕೊಂಡು ನೋಡಿದರೆ 
  • 4 ವರ್ಷಗಳ  ಅಭಿವೃದ್ದಿಯ ವೇಗ ಅರ್ಥವಾಗುತ್ತದೆ
  • ಹಿಂದಿನ ವೇಗದಲ್ಲಿ ಶೌಚಾಲಯಗಳ ನಿರ್ಮಾಣ ನಡೆದಿದ್ದರೆ 100 ಪ್ರತಿಶತ ಶೌಚಾಲಯಕ್ಕೆ
  • ಎಷ್ಟೋ ದಶಕಗಳು ಬೇಕಾಗುತ್ತಿತ್ತು
  • 2014ರಲ್ಲಿ ಜನ ಕೇವಲ ಸರ್ಕಾರವನ್ನು ಆರಿಸಿ ಸುಮ್ಮನಾಗಲಿಲ್ಲ
  • ದೇಶವನ್ನು ಕಟ್ಟಲು ಸರ್ಕಾರದ ಜತೆ ಕೈಜೋಡಿಸಿದ್ದರು, ಇದೇ ಭಾರತದ ಶಕ್ತಿ 
  • ಅರಬಿಂದೋರನ್ನು ಸ್ಮರಿಸಿದ ಪ್ರಧಾನಿ ಮೋದಿ
  • ‘ಭಾರತ ಎಂದರೆ ಕೇವಲ ಭೂಮಿಯ ತುಂಡಲ್ಲ, ಅದೊಂದು ವಿಶಾಲ ಶಕ್ತಿ’
  • ಲಕ್ಷ, ಲಕ್ಷ ಅಸಂಘಟಿತ ಶಕ್ತಿಗಳ ಮೂರ್ತ ರೂಪ ಎಂದಿದ್ದರು ಅರಬಿಂದೋ
  • ತಮಿಳಿನ ಖ್ಯಾತ ಕವಿ ಸುಬ್ರಹ್ಮಣ್ಯಂ ಭಾರತಿ ಅವರನ್ನು ಸ್ಮರಿಸಿದ ಮೋದಿ
  • ‘ಭಾರತ ಎಲ್ಲ ರೀತಿಯ ಬಂಧನಗಳಿಂದ ಬಿಡಿಸಿಕೊಳ್ಳುವ ದಾರಿಯನ್ನು ಪ್ರಪಂಚಕ್ಕೆ ತೋರಿಸುತ್ತದೆ’ ಹೀಗೆಂದು ಹೇಳಿದ್ದರು ಸುಬ್ರಹ್ಮಣ್ಯಂ ಭಾರತಿ - ಮೋದಿ 
  • ಡಾ. ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾದ ಸಂವಿಧಾನ ಭಾರತದ ಭವಿಷ್ಯದ ಕನಸು ಕಟ್ಟಿಕೊಡುತ್ತದೆ
  • ಸಮಸ್ತ ಭಾರತೀಯರನ್ನು ಮೇಲೆತ್ತುವ ಮಾರ್ಗವನ್ನು ಸಂವಿಧಾನ ತೋರಿಸುತ್ತದೆ
  • ಭಾರತ  6ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ ವರ್ಷವಿದು
  • ದೇಶಕ್ಕಾಗಿ ಬಲಿದಾನ ಮಾಡಿದ ಸೈನಿಕರನ್ನು ಸ್ಮರಿಸಿದ ಪ್ರಧಾನಿ ಮೋದಿ
  • ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ 100 ವರ್ಷ ತುಂಬುತ್ತದೆ
  • ಜಲಿಯನ್ ವಾಲಾಬಾಗ್ ಹತ್ಯಾಕಾಂಡ ತ್ಯಾಗ, ಬಲಿದಾನದ ಪ್ರೇರಣೆಯ ಸಂದೇಶ ನೀಡುತ್ತದೆ
  • ಲಕ್ಷಾಂತರ ಯುವಕರು ತಮ್ಮ ಯೌವ್ವನವನ್ನು ಜೈಲಿನಲ್ಲಿ ಕಳೆದು ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ
  • ಸಂಸತ್ ಈ ಅವಧಿ ಸಾಮಾಜಿಕ ನ್ಯಾಯದ ಉದಾಹರಣೆ
  • ಸಾಮಾಜಿಕ ನ್ಯಾಯವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ
  • ಸಂಸತ್ನಲ್ಲಿ ಒಬಿಸಿ ಹಕ್ಕುಗಳನ್ನು ಕಾಪಾಡಲು ಸಾಂವಿಧಾನಿಕ ಬಲ ನೀಡಲಾಗಿದೆ
  • ದೇಶ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದೆ
  • ಹೊಸ ಕನಸು, ಉತ್ಸಾಹದೊಂದಿಗೆ ಮುನ್ನುಗುತ್ತಿದೆ
  • ಅರಣ್ಯದಲ್ಲಿ ವಾಸಿಸುವ ಆದಿವಾಸಿಗಳು ಎವರೆಸ್ಟ್ ಏರಿದ್ದಾರೆ
  • ದಕ್ಷಿಣದ ನೀಲಗಿರಿ ಬೆಟ್ಟಗಳಲ್ಲಿ ನೀಲಿ ಪುಷ್ಪ ರಾರಾಜಿಸುತ್ತಿದೆ
  • ಸ್ವಾತಂತ್ರ್ಯ ಸಂಭ್ರಮಕ್ಕೆ ಇನ್ನಷ್ಟು ಮೆರಗು ತುಂಬಿದೆ
  • ಎವೆರೆಸ್ಟ್ ಏರಿದ ಸಾಹಸಿಗರು ತ್ರಿವರ್ಣ ಧ್ವಜ ಹಾರಿಸಿ ಹೆಮ್ಮೆ ಮೂಡಿಸಿದ್ದಾರೆ 
Follow Us:
Download App:
  • android
  • ios