ಅಕ್ರಮ ಆದಾಯ ಬಹಿರಂಗಪಡಿಸುವ ಯೋಜನೆಯಿಂದ 65 ಸಾವಿರ ಕೋಟಿ ಸಂಗ್ರಹವಾಗಿದೆ

ವಡೋದರಾ(ಅ.23): ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನಾ ಪಡೆ ನಡೆಸಿದ ಸರ್ಜಿಕಲ್ ದಾಳಿ ನಡೆಸಿದಂತೆ ಕಪ್ಪುಹಣ ಪತ್ತೆಗೂ ಅನುಸರಿಸಿದರೆ ಹೇಗಿರುತ್ತದೆ? ಈ ಪ್ರಶ್ನೆಯನ್ನು ಪ್ರಧಾನಿ ನರೇಂದ್ರ ಮೋದಿ ಮುಂದಿಟ್ಟಿದ್ದಾರೆ. ಗುಜರಾತ್‌ನ ವಡೋದರಾದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಕ್ರಮ ಆದಾಯ ಬಹಿರಂಗಪಡಿಸುವ ಯೋಜನೆಯಿಂದ 65 ಸಾವಿರ ಕೋಟಿ ಸಂಗ್ರಹವಾಗಿರುವುದನ್ನು ಅವರು ಪ್ರಸ್ತಾಪಿಸಿದರು.

ವಿವಿಧ ಯೋಜನೆಗಳ ಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ಅದರ ಮೂಲಕ ನೀಡಲಾಗುವ ಸಬ್ಸಿಡಿ ಹಣವನ್ನು ಖಾತೆಗೆ ವರ್ಗಾಯಿಸುವ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ 36 ಸಾವಿರ ಕೋಟಿ ಸೋರಿಕೆಯಾಗುವುದನ್ನು ತಪ್ಪಿಸಿದ್ದೇವೆ. ಈ ಮೂಲಕ ಒಟ್ಟು 1 ಲಕ್ಷ ಕೋಟಿಯನ್ನು ಉಳಿತಾಯ ಮಾಡಿದಂತಾಗಿದೆ ಎಂದು ಅವರು ಹೇಳಿದ್ದಾರೆ. ಆದಾಯ ಸೋರಿಕೆಗೆ ಯಾವುದೇ ಕಠಿಣ ಕ್ರಮ ಕೈಗೊಳ್ಳದೆ ಇಷ್ಟು ಮೊತ್ತ ಉಳಿಕೆ ಮಾಡಿದ್ದೇವೆ. ಇನ್ನು ಸರ್ಜಿಕಲ್ ದಾಳಿಯಂಥ ಕ್ರಮ ಅನುಸರಿಸಿದರೆ ಹೇಗಿರುತ್ತದೆ ಎಂದು ಪ್ರಶ್ನಿಸಿದರು.