ಸ್ವಂತ ತಮ್ಮನ ಜೊತೆ ಮೋದಿ ಮಾತನಾಡಿದ್ದು ಕೇವಲ ಅರ್ಧ ತಾಸು ಮಾತ್ರ

First Published 27, Feb 2018, 5:47 PM IST
PM Modi Give a time to his brother not more than half an hour
Highlights

 ಗುಜರಾತ್ ವಾರ್ತಾ ಇಲಾಖೆಯಲ್ಲಿ ಅಧಿಕಾರಿಯಾಗಿರುವ  ಪ್ರಧಾನಿ ನರೇಂದ್ರ ಮೋದಿ ಅವರ ತಮ್ಮ ಪಂಕಜ್ ಮೋದಿ ಬರೋಬ್ಬರಿ ಒಂದೂವರೆ ತಿಂಗಳು ಗಣರಾಜ್ಯೋತ್ಸವ ಪರೇಡ್‌ನ  ಟ್ಯಾಬ್ಲೋ ಕೆಲಸದ ನಿಮಿತ್ತ ದೆಹಲಿಯಲ್ಲಿ ಬೀಡು ಬಿಟ್ಟು ಕಳೆದ ವಾರ ವಾಪಸ್ ಆದರು.

ನವದೆಹಲಿ (ಫೆ. 27): ಗುಜರಾತ್ ವಾರ್ತಾ ಇಲಾಖೆಯಲ್ಲಿ ಅಧಿಕಾರಿಯಾಗಿರುವ  ಪ್ರಧಾನಿ ನರೇಂದ್ರ ಮೋದಿ ಅವರ ತಮ್ಮ ಪಂಕಜ್ ಮೋದಿ ಬರೋಬ್ಬರಿ ಒಂದೂವರೆ ತಿಂಗಳು ಗಣರಾಜ್ಯೋತ್ಸವ ಪರೇಡ್‌ನ  ಟ್ಯಾಬ್ಲೋ ಕೆಲಸದ ನಿಮಿತ್ತ ದೆಹಲಿಯಲ್ಲಿ ಬೀಡು ಬಿಟ್ಟು ಕಳೆದ ವಾರ ವಾಪಸ್ ಆದರು.

ಸ್ವಂತ ತಮ್ಮನಿಗೆ ಪ್ರಧಾನಿ ಮೋದಿ  ಸಿಕ್ಕಿದ್ದು ಒಮ್ಮೆ ರಾತ್ರಿ ಊಟಕ್ಕೆ ಮಾತ್ರವಂತೆ. ಸ್ವಂತ ತಮ್ಮನೇ  ಆದರೂ ಕೂಡ ಮೋದಿ ಅರ್ಧ ಗಂಟೆ ಕರೆದು ಊಟದ ಸಮಯದಲ್ಲಿ ಹರಟೆ ಹೊಡೆದು ಕಳುಹಿಸಿದ್ದಾರೆ. ಪಂಕಜ್ ಒಂದೂವರೆ ತಿಂಗಳು ಉಳಿದಿದ್ದು ಅಣ್ಣನ ಮನೆಯಲ್ಲಿ ಅಲ್ಲ, ಉಳಿದ ಅಧಿಕಾರಿಗಳಂತೆ ಗುಜರಾತ್ ಭವನದಲ್ಲಿ. ಪಕ್ಕದಲ್ಲಿಯೇ ಇರುವ ಕರ್ನಾಟಕ ಭವನಕ್ಕೆ ತಿಂಡಿಗೆಂದು ಎರಡು ಬಾರಿ ಬಂದರೂ ಪಂಕಜ್ ಅಣ್ಣನ ಹೆಸರು ಹೇಳಿಕೊಂಡಿಲ್ಲವಂತೆ.
ಹಿಂದೆ ಮನಮೋಹನ ಸಿಂಗ್ ಪ್ರಧಾನಿ ಆಗಿದ್ದಾಗ ಪಂಜಾಬ್ ’ನಿಂದ ರೇಸ್‌ಕೋರ್ಸ್ ರೋಡ್ ಎದುರು ರಿಕ್ಷಾದಲ್ಲಿ ಬಂದಿಳಿದ ಅವರ ಅಣ್ಣನನ್ನು ನೋಡಿ ಸಿಬ್ಬಂದಿ ಚಕಿತವಾಗಿದ್ದರಂತೆ.  

-ಪ್ರಶಾಂತ್ ನಾತು

ಹೆಚ್ಚಿನ ಓದಿಗೆ ಇಂಡಿಯಾ ಗೇಟ್  ಕ್ಲಿಕ್ಕಿಸಿ 

loader