ಪ್ರಧಾನಿ ಮೋದಿಯಿಂದ ಎರಡನೇ ಅವಧಿಯ ಮೊದಲ ಮನ್ ಕಿ ಬಾತ್| ಮನ್ ಕಿ ಬಾತ್’ನಲ್ಲಿ ಜನರ ಮೇಲೆ ನಂಬಿಕೆ ಇದೆ ಎಂದ ಮೋದಿ| ‘ದೇಶ ಕಟ್ಟುವ ಮಹಾನ್ ಕಾರ್ಯದಲ್ಲಿ ಇಡೀ ಸಮಾಜ ಒಂದಾಗಿದೆ’| ಮೊದಲ ಮನ್ ಕಿ ಬಾತ್’ನಲ್ಲಿ ನೀರಿನ ಸಮಸ್ಯೆ ಕುರಿತು ಮಾತನಾಡಿದ ಪ್ರಧಾನಿ| 

ನವದೆಹಲಿ(ಜೂ.30): ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ‘ಮನ್ ಕಿ ಬಾತ್’ ಉದ್ದೇಶಿಸಿ ಮಾತನಾಡಿದ್ದಾರೆ.

Scroll to load tweet…

ಮೊದಲನೆಯ ಅವಧಿಯ ಕೊನೆಯ ಮನ್ ಕಿ ಬಾತ್’ನಲ್ಲಿ ತಾವು ಶೀಘ್ರದಲ್ಲೇ ಮತ್ತೆ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ಜನರನ್ನು ತಲುಪುವುದಾಗಿ ಪ್ರಧಾನಿ ಮೋದಿ ವಾಗ್ದಾನ ಮಾಡಿದ್ದರು.

Scroll to load tweet…

ಅದರಂತೆ ಎರಡನೇ ಅವಧಿಯ ಮೊದಲ ಮನ್ ಕಿ ಬಾತ್’ನಲ್ಲಿ ತಾವು ಈ ರೀತಿ ವಾಗ್ದಾನ ಮಾಡಲು, ಜನರ ಮೇಲೆ ತಮಗಿದ್ದ ಅಪಾರ ನಂಬಿಕೆಯೇ ಕಾರಣ ಎಂದು ಮೋದಿ ಹೇಳಿದ್ದಾರೆ.

Scroll to load tweet…

ಕಳೆದ 5 ವರ್ಷಗಳಲ್ಲಿ ತಾವು ಮನ್ ಕಿ ಬಾತ್ ಕಾರ್ಯಕ್ರಮಕ್ಕಾಗಿ ಅನೇಕ ಪತ್ರಗಳನ್ನ ಸ್ವೀಕರಿಸಿದ್ದು, ಒಂದೇ ಒಂದು ಪತ್ರ ಸ್ವಂತ ಕೆಲಸಕ್ಕಾಗಿ ಮನವಿ ಮಾಡಿ ಬಂದಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ.

ದೇಶ ಕಟ್ಟುವ ಮಹಾನ್ ಕಾರ್ಯದಲ್ಲಿ ಇಡೀ ಸಮಾಜ ಒಂದಾಗಿರುವ ಸಂಕೇತ ಸ್ಪಷ್ಟವಾಗಿ ಕಂಡು ಬರುತ್ತಿದ್ದು, ನವ ಭಾರತದ ತಮ್ಮ ಸಂಕಲ್ಪ ಸಾಕಾರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮೋದಿ ಹೇಳಿದರು.

Scroll to load tweet…

ಸದ್ಯ ದೇಶ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ನೀರಿನ ಉಳಿತಾಯವೇ ಈ ಸಮಸ್ಯೆಗೆ ಪರಿಹಾರ ಎಂದು ಪ್ರಧಾನಿ ಹೇಳಿದರು. ಸಮಾಜ ತಾನೇ ಮುಂದಾಗಿ ನೀರಿನ ಉಳಿತಾಯ ಮಾಡಿದರೆ ಅದು ನಿಜಕ್ಕೂ ಹೊಸ ಕ್ರಾಂತಿಕಾರಿ ಬದಲಾವಣೆಗಳಿಗೆ ನಾಂದಿಯಾಗಲಿದೆ ಎಂದು ಪ್ರಧಾನಿ ನುಡಿದರು.