ತಮ್ಮ ಬಂಧುವಿನ ಮನೆಗೆ ಭೇಟಿ ನೀಡಿ, ಗುಜರಾತಿಗೆ ಮರಳುತ್ತಿದ್ದ ಪ್ರಧಾನಿ ಮೋದಿ ಪತ್ನಿ ಜಶೋದಾ ಬೇನ್ ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದು, ಅಪಘಾತವಾಗಿದೆ.
ಜಯಪುರ್: ಪ್ರಧಾನಿ ಮೋದಿ ಪತ್ನಿ ಜಶೋಬೆನ್ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕೋಟಾ-ಚಿತ್ತೋಸ್‌ಗಢ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬೆಳಗ್ಗೆ ಅಪಘಾತವಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಚಿತ್ತೋರ್‌ಗಢ್‌ನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಕೋಟಾ ಸಮೀಪದ ತಮ್ಮ ಬಂಧುಗಳ ಮನೆಗೆ ಭೇಟಿ ನೀಡಿ, ಇನ್ನೋವಾದಲ್ಲಿ ಗುಜರಾತಿಗೆ ಮರಳುತ್ತಿದ್ದರು. ಆಗ ಈ ಅವಘಡ ಸಂಭವಿಸಿದೆ.
ಕಾರನ್ನು ಚಾಲನೆ ಮಾಡುತ್ತಿದ್ದ ಸಂಬಂಧಿ ವಸಂತಿಬಾಯಿ ಮೋದಿಗೂ ಗಾಯಗಳಾಗಿವೆ.
