ಪ್ರಧಾನಿ ಮೋದಿ ಕನಸಿನ ಕ್ಯಾಷ್ ಲೆಸ್ ಭಾರತವನ್ನ ನನಸು ಗೊಳಿಸುವತ್ತ ಹುಬ್ಬಳ್ಳಿ, ಧಾರವಾಡ ಜನರು ಮುನ್ನುಡಿ ಬರೆದಿದ್ದಾರೆ. ಡಿಜಿಟಲ್ ಇಂಡಿಯಾದ ಮೊದಲ ಹೆಜ್ಜೆಯಾದ ಡಿಜಿಟಲ್ ಗ್ರಾಮದ ಕಲ್ಪನೆಯನ್ನ ಹುಬ್ಬಳ್ಳಿ ತಾಲೂಕಿನ ನಾಲ್ಕು ಹಳ್ಳಿಗಳು ಸಾಕಾರಗೊಳಿಸುತ್ತಿವೆ. ಹಾಗಾದ್ರೆ ಆ ಹಳ್ಳಿಗಳು ಯಾವುವು? ನಗದು ರಹಿತ ವಹಿವಾಟಿಗೆ ಯಾವ ರೀತಿ ಸಿದ್ಧತೆ ನಡೆದಿದೆ ನೋಡೋಣ.
ಬೆಂಗಳೂರು (ಡಿ.26): ಪ್ರಧಾನಿ ಮೋದಿ ಕನಸಿನ ಕ್ಯಾಷ್ ಲೆಸ್ ಭಾರತವನ್ನ ನನಸು ಗೊಳಿಸುವತ್ತ ಹುಬ್ಬಳ್ಳಿ, ಧಾರವಾಡ ಜನರು ಮುನ್ನುಡಿ ಬರೆದಿದ್ದಾರೆ. ಡಿಜಿಟಲ್ ಇಂಡಿಯಾದ ಮೊದಲ ಹೆಜ್ಜೆಯಾದ ಡಿಜಿಟಲ್ ಗ್ರಾಮದ ಕಲ್ಪನೆಯನ್ನ ಹುಬ್ಬಳ್ಳಿ ತಾಲೂಕಿನ ನಾಲ್ಕು ಹಳ್ಳಿಗಳು ಸಾಕಾರಗೊಳಿಸುತ್ತಿವೆ. ಹಾಗಾದ್ರೆ ಆ ಹಳ್ಳಿಗಳು ಯಾವುವು? ನಗದು ರಹಿತ ವಹಿವಾಟಿಗೆ ಯಾವ ರೀತಿ ಸಿದ್ಧತೆ ನಡೆದಿದೆ ನೋಡೋಣ.
ಡಿಜಿಟಲ್ಗ್ರಾಮ
ಮೋದಿ ಕನಸಿಗೆ ಸಾಥ್ ನೀಡಿರೋದು ವಿಜಯಬ್ಯಾಂಕ್ ಮತ್ತು 4 ಗ್ರಾಮಗಳು. ಬ್ಯಾಂಕ್ ಸಿಬ್ಬಂದಿಯೇ ಮನೆ ಮನೆಗೆ ತೆರಳಿ ಖಾತೆಗಳನ್ನು ಮಾಡಿಸಿದ್ದಾರೆ. ಮತ್ತೊಂದಡೆ ಸಾಕ್ಷ ಚಿತ್ರಗಳ ಮೂಲಕ ಮೊಬೈಲ್ ಬ್ಯಾಂಕಿಂಗ್, ಎಸ್ಎಂಎಸ್ ಬ್ಯಾಂಕಿಂಗ್, ವಾಲೆಟ್ ಸೇವೆಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಧಾರವಾಡ ಜಿಲ್ಲೆಯ 4 ಹಳ್ಳಿಗಳು ಹಾಗೂ ಬೆಳಗಾವಿ ಜಿಲ್ಲೆಯ 2 ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡಿದೆ. ಹುಬ್ಬಳ್ಳಿ ತಾಲೂಕಿನ ಕೋಳಿವಾಡ, ಬಂಡಿವಾಡ, ಛಬ್ಬಿ, ಹಾಗೂ ಅರಳಿಕಟ್ಟಿವಗ್ರಾಮ, ಬೆಳಗಾವಿಯ ದಡ್ಡಿ ಹಾಗೂ ಹಿರೇಕೊಪ್ಪ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಈಗಾಗಲೇ ಈ ಗ್ರಾಮಗಳಲ್ಲಿ ಶೇ.94 ರಷ್ಟು ಜನ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಇನ್ನುಳಿದ ಶೇ.6 ರಷ್ಟು ಜನರನ್ನು ಕೂಡಾ ಖಾತೆದಾರರನ್ನಾಗಿ ಮಾಡೋದ್ ಬ್ಯಾಂಕ್ ಸಿಬ್ಬಂದಿಯ ಗುರಿ. ಆಯ್ಕೆ ಆಗಿರುವ ಈ 6 ಹಳ್ಳಿಗಳಿಗು ಉಚಿತ ಹಾಗೂ ಶಾಶ್ವತ ವೈ-ಪೈ ಟವರ್ ಸೌಲಭ್ಯ ನೀಡಲು ವಿಜಯಾ ಬ್ಯಾಂಕ್ ಮುಂದಾಗಿದೆ. ಅಷ್ಟೇ ಅಲ್ಲದೇ ರುಪೆ ಡೆಬಿಟ್ ಕಾರ್ಡ್, ಮೊಬೈಲ್ ಬ್ಯಾಂಕಿಂಗ್ ಮತ್ತು ಅನಕ್ಷರಸ್ಥರ ಖಾತೆಗಳಿಗೆ ಆಧಾರ ಸಂಖ್ಯೆಯನ್ನು ಜೋಡಿಸಿ, ಹೆಬ್ಬೆಟ್ಟು ಹೊತ್ತಿ ಹಣ ಪಡೆಯುವ ಸೌಲಭ್ಯವನ್ನು ಕೂಡ ಇಲ್ಲಿ ಕಲ್ಪಿಸಲಾಗುತ್ತಿದೆ.
ಇನ್ನೂ ಸ್ಮಾರ್ಟ್ಫೋನ್ ಬಳಸುವ ಖಾತೆದಾರರಿಗೆ ವ್ಯಾಲೆಟ್ ಆ್ಯಪ್ ಮಾಹಿತಿ ನೀಡಲಾಗಿದ್ದು, ಪ್ರತಿ ಹಳ್ಳಿಯ ತಲಾ 5 ವ್ಯಾಪಾರಿಗಳಿಗೆ 6 ತಿಂಗಳ ಕಾಲ ಶುಲ್ಕ ರಹಿತ ಸ್ವೈಪಿಂಗ್ ಮಷಿನ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಜಯಾ ಬ್ಯಾಂಕ್ ನ ಈ ಮಹತ್ವಾಕಾಂಕ್ಷೆ ಯೋಜನೆಯನ್ನ ಗ್ರಾಮಸ್ಥರು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ. ಆಷ್ಟೇ ಅಲ್ಲದೇ ಈಗಾಗಲೇ ಡಿಜಿಟಲೀಕರಣ ಕುರಿತಾ ತರಬೇತಿ, ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆನ್ ಲೈನ್ ವಹಿವಾಟಿಗೆ ಮುಂದಾಗಿದ್ದಾರೆ.
ಈ ಕಾರ್ಯಕ್ಕಾಗಿ ವಿಜಯಾಬ್ಯಾಂಕ್ ‘ಬ್ಯಾಂಕ್ ಮಿತ್ರ’ ಎಂಬ ವಿಶೇಷ ಪ್ರತಿನಿಧಿಗಳನ್ನ ನೇಮಿಸಿದೆ. ಈ ವಿಶೇಷ ಪ್ರತಿನಿಧಿ, ಹಳ್ಳಿಯಲ್ಲಿ ಓಡಾಡುತ್ತ ಬ್ಯಾಂಕಿಂಗ್ ಸೇವೆ ಒದಗಿಸಲಿದ್ದಾನೆ. ಅದ್ರಲ್ಲೂ ಖಾತೆದಾರರ ಹಣ ಪಡೆಯಲು ಹಾಗೂ ಜಮಾ ಮಾಡಲು, ಆಧಾರ ಸಂಖ್ಯೆ ಜೊತೆಗೆ ಸ್ವೈಪಿಂಗ್ ಮಷಿನ್ ಮೇಲೆ ಹೆಬ್ಬೆಟ್ಟು ಹೊತ್ತಿ, ವಹಿವಾಟು ನಡೆಸಲು ಸಹಾಯ ಮಾಡುತ್ತಿದ್ದಾನೆ. ಒಟ್ಟಿನಲ್ಲಿ ಕ್ಯಾಷ್ ಲೆಸ್ ಗ್ರಾಮದ ಕನಸು ಇಲ್ಲಿ ನನಸಾಗ್ತಿದೆ.
