ನೂತನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗೆ ಪ್ರಧಾನಿ ಮೋದಿ ಶುಭಾಶಯ ಯಡಿಯೂರಪ್ಪ ಪ್ರಮಾಣ ವಚನ ಮಾಡಿದ ಬಳಿಕ ಶುಭಾಶಯ ಕೋರಿರಲಿಲ್ಲ ಮೋದಿ
ನವದೆಹಲಿ: ಬುಧವಾರ ರಾಜ್ಯದ ನೂತನ ಮುಖ್ಯಮಂತ್ರಿ, ಉಪ-ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಎಚ್.ಡಿ. ಕುಮಾರಸ್ವಾಮಿ ಹಾಗೂ ಡಾ. ಜಿ. ಪರಮೆಶ್ವರ್ ಅವರಿಗೆ ಪ್ರಧಾನಿ ಮೋದಿ ಶುಭಾಶಯಗಳನ್ನು ಕೋರಿದ್ದಾರೆ.
ದೂರವಾಣಿ ಕರೆ ಮಾಡಿಯೂ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಉತ್ತಮ ಬಾಂಧವ್ಯ ಇರಲಿ ಎಂಬ ಆಶಯವನ್ನು ಮೋದಿ ವ್ಯಕ್ತ ಪಡಿಸಿದ್ದಾರೆ.
ಆದರೆ, ಕಳೆದ ವಾರ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ, ಪ್ರಧಾನಿ ಮೋದಿ ಸಾರ್ವಜನಿಕವಾಗಿ ಯಾವುದೇ ಅಭಿನಂದನೆಯನ್ನು ಹೇಳಿರಲಿಲ್ಲ. ಯಡಿಯೂರಪ್ಪ ಸರ್ಕಾರದ ಮುಂದುವರಿಯುವ ಬಗ್ಗೆ ಖುದ್ದು ಪ್ರಧಾನಿಗೆ ಗೊಂದಲಗಳಿತ್ತು ಎಂಬ ವಾದಕ್ಕೆ ಇದು ಪುಷ್ಠಿ ನೀಡುತ್ತದೆ.
