ಇಂದು 35ನೇ ಮನ್ ಕಿ ಬಾತ್'ನಲ್ಲಿ ಮಾತನಾಡಿ ಪ್ರಧಾನಿ ಮೋದಿ ಹರ್ಯಾಣದಲ್ಲಿ ಬಾಬಾ ರಹೀಂ ಬೆಂಬಲಿಗರ ಹಿಂಸಾಚಾರವನ್ನು ಖಂಡಿಸಿದ್ದಾರೆ. ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ನ್ಯಾಯಕ್ಕೆ ಅವಕಾಶವಿದೆಯೇ ಹೊರತು ನಂಬಿಕೆಯ ಹೆಸರಲ್ಲಿ ಹಿಂಸೆಗೆ ಜಾಗವಿಲ್ಲವೆಂದು ಮೋದಿ ಹೇಳಿದ್ದಾರೆ.
ನವದೆಹಲಿ: ಇಂದು 35ನೇ ಮನ್ ಕಿ ಬಾತ್'ನಲ್ಲಿ ಮಾತನಾಡಿ ಪ್ರಧಾನಿ ಮೋದಿ ಹರ್ಯಾಣದಲ್ಲಿ ಬಾಬಾ ರಹೀಂ ಬೆಂಬಲಿಗರ ಹಿಂಸಾಚಾರವನ್ನು ಖಂಡಿಸಿದ್ದಾರೆ.
ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ನ್ಯಾಯಕ್ಕೆ ಅವಕಾಶವಿದೆಯೇ ಹೊರತು ನಂಬಿಕೆಯ ಹೆಸರಲ್ಲಿ ಹಿಂಸೆಗೆ ಜಾಗವಿಲ್ಲವೆಂದು ಮೋದಿ ಹೇಳಿದ್ದಾರೆ.
ಧರ್ಮದ ಹೆಸರಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರ ಇಲ್ಲವೆಂದು ಡೇರಾ ಗೂಂಡಾಗಳ ಬಗ್ಗೆ ಪ್ರಧಾನಿ ಮೌನ ಮುರಿದಿದ್ದಾರೆ. ದೇಶವಾಗಲಿ, ಸರ್ಕಾರವಾಗಲಿ ಯಾರನ್ನು ಸಹಿಸಿಕೊಳ್ಳಲ್ಲ ಎಂದು ಗೂಂಡಾಗಳಿಗೆ ಪ್ರಧಾನಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
