ಉತ್ತರ ಪ್ರದೇಶದ ಬೃಹತ್ ರ್ಯಾಲಿನ್ನುದ್ದೇಶಿ ಮಾತನಾಡುತ್ತಾ, ತಾವು ಟೀ ಮಾರಾಟಗಾರರಾಗಿದ್ದಾಗಿನ ಬದುಕನ್ನು ಬಿಚ್ಚಿಟ್ಟರು. ಈ ಸಂದರ್ಭದಲ್ಲಿ ನೋಟುಗಳ ರದ್ದು ವಿಚಾರವನ್ನು ಪ್ರಸ್ತಾಪಿಸಿ, ಈ ಆಘಾತವು ಕಪ್ಪುಹಣ ಹೊಂದಿದವರಿಗೆ 'ಖಡಕ್ ಚಾಯ್' ಇದ್ದಂತೆ ಎಂದು ವರ್ಣಿಸಿದ್ದಾರೆ.
ಉತ್ತರಪ್ರದೇಶ (ನ.14): 500 ಹಾಗೂ 1000 ರೂ. ನೋಟುಗಳನ್ನು ರದ್ದುಗೊಳಿಸಿ ಕಾಳಧನಿಕರಿಗೆ ನೀಡಿದ ಆಘಾತವನ್ನು ಪ್ರಧಾನಿ ನರೇಂದ್ರ ಮೋದಿ 'ಖಡಕ್ ಚಾಯ್' ಗೆ ಹೋಲಿಸಿದ್ದಾರೆ.
ಉತ್ತರ ಪ್ರದೇಶದ ಬೃಹತ್ ರ್ಯಾಲಿನ್ನುದ್ದೇಶಿ ಮಾತನಾಡುತ್ತಾ, ತಾವು ಟೀ ಮಾರಾಟಗಾರರಾಗಿದ್ದಾಗಿನ ಬದುಕನ್ನು ಬಿಚ್ಚಿಟ್ಟರು. ಈ ಸಂದರ್ಭದಲ್ಲಿ ನೋಟುಗಳ ರದ್ದು ವಿಚಾರವನ್ನು ಪ್ರಸ್ತಾಪಿಸಿ, ಈ ಆಘಾತವು ಕಪ್ಪುಹಣ ಹೊಂದಿದವರಿಗೆ 'ಖಡಕ್ ಚಾಯ್' ಇದ್ದಂತೆ ಎಂದು ವರ್ಣಿಸಿದ್ದಾರೆ.
ಭಾರತದ ಆರ್ಥಿಕತೆಯಲ್ಲಿ ಕಪ್ಪುಹಣವನ್ನು ಸಂಪೂರ್ಣವಾಗಿ ನಾಶಪಡಿಸಲು 50 ದಿನಗಳ ಕಾಲಾವಕಾಶ ಕೊಡಿ. ದೇಶದಲ್ಲಿ ಹಳೆ-ಹೊಸ ನೋಟುಗಳ ವಿನಿಮಯ ನಡೆಯುತ್ತಿದೆ. ಇದು ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತಿದೆ. ಪ್ರಸ್ತುತ ಆಗುತ್ತಿರುವ ಅನಾನುಕೂಲತೆಯನ್ನು ಜನರು ಸಹಿಸಿಕೊಳ್ಳಬೇಕು ಎಂದು ರ್ಯಾಲಿಯಲ್ಲಿ ಮೋದಿ ವಿನಂತಿಸಿಕೊಂಡಿದ್ದಾರೆ.