ಬಿಜೆಪಿ ಬೃಹತ್ ಸಮಾವೇಶಕ್ಕೆ ಸಾಕ್ಷಿಯಾಗಲಿದೆ ದಾವಣಗೆರೆ; ಸಮಾವೇಶಕ್ಕೆ ಬರಲಿದ್ದಾರೆ ’ನಮೋ’

PM Modi come to Davanagere Conference
Highlights

ಮಧ್ಯಕರ್ನಾಟಕದ ದಾವಣಗೆರೆ ಇವತ್ತು ಬಿಜೆಪಿ ಬೃಹತ್ ರೈತ ಸಮಾವೇಶಕ್ಕೆ ಸಾಕ್ಷಿಯಾಗಲಿದೆ..  ರೈತನಾಯಕ ಬಿ ಎಸ್  ಯಡಿಯೂರಪ್ಪನವರ ಹುಟ್ಟುಹಬ್ಬದ ಅಂಗವಾಗಿ ನಡೆಯುತ್ತಿರುವ ಬೃಹತ್ ರೈತ ಸಮಾವೇಶದಲ್ಲಿ ಪ್ರಧಾನ ಮಂತ್ರಿ ಮೋದಿ ಮತ್ತೊಮ್ಮೆ ಆಡಳಿತ ಪಕ್ಷದ ವಿರುದ್ಧ ಗುಡುಗಲಿದ್ದಾರೆ.  

ಬೆಂಗಳೂರು (ಫೆ. 27):  ಮಧ್ಯಕರ್ನಾಟಕದ ದಾವಣಗೆರೆ ಇವತ್ತು ಬಿಜೆಪಿ ಬೃಹತ್ ರೈತ ಸಮಾವೇಶಕ್ಕೆ ಸಾಕ್ಷಿಯಾಗಲಿದೆ..  ರೈತನಾಯಕ ಬಿ ಎಸ್  ಯಡಿಯೂರಪ್ಪನವರ ಹುಟ್ಟುಹಬ್ಬದ ಅಂಗವಾಗಿ ನಡೆಯುತ್ತಿರುವ ಬೃಹತ್ ರೈತ ಸಮಾವೇಶದಲ್ಲಿ ಪ್ರಧಾನ ಮಂತ್ರಿ ಮೋದಿ ಮತ್ತೊಮ್ಮೆ ಆಡಳಿತ ಪಕ್ಷದ ವಿರುದ್ಧ ಗುಡುಗಲಿದ್ದಾರೆ.  

ಮಧ್ಯಕರ್ನಾಟಕದಲ್ಲಿ ಇಂದು ಕಮಲ ಪಡೆ ಬೃಹತ್ ಸಮಾವೇಶ ನಡೆಸುತ್ತಿದೆ. ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ  ಹುಟ್ಟುಹಬ್ಬದ ಪ್ರಯುಕ್ತ ನಡೆಯುವ ಬೃಹತ್ ರೈತ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿದ್ದಾರೆ.  ಬೆಂಗಳೂರು, ಮೈಸೂರು,  ಸಮಾವೇಶದ ನಂತರ  ದಾವಣಗೆರೆ ರೈತ ಸಮಾವೇಶ ಚುನಾವಣೆಯಲ್ಲಿ ಹಿನ್ನಲೆಯಲ್ಲಿ ತುಂಬಾ ಪ್ರಾಮುಖ್ಯತೆ ಪಡೆದಿದ್ದು ಬಿಜೆಪಿಗೆ ಮತ್ತಷ್ಟು ಶಕ್ತಿ ತುಂಬಲಿದೆ.  ಸಂಜೆ 4 ಗಂಟೆಗೆ ರೈತರ ಅನ್ನದಾತ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ನಾಡಿನ ಮೂಲೆ ಮೂಲೆಯಿಂದ  3 ಲಕ್ಷಕ್ಕೂ ಹೆಚ್ಚು ರೈತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. 
ಒಂದು ಗಂಟೆಗೂ ಹೆಚ್ಚು  ಕಾಲ  ರೈತರನ್ನು ಉದ್ದೇಶಿಸಿ ಮಾತನಾಡುವ ಮೋದಿ, ಯಡಿಯೂರಪ್ಪನವರಿಗೆ ರೈತ ಬಂಧು ಎಂಬ ಬಿರುದು ನೀಡಿ ಅವರಿಗೆ ಮರದ ನೇಗಿಲನ್ನು ಉಡುಗೊರೆಯಾಗಿ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಮುಷ್ಠಿ ಅಕ್ಕಿ ಯೋಜನೆಗೆ ಮೋದಿ ಚಾಲನೆ ನೀಡಲಿದ್ದಾರೆ. ಬಿಜೆಪಿ ಕಾರ್ಯಕರ್ತರು ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮನೆಗಳಿಗೆ  ತೆರೆಳಿ  ಪ್ರತಿಜ್ಞಾ ವಿಧಿ ಬೋಧಿಸುವುದೇ ಅಭಿಯಾನದ ಉದ್ದೇಶ.  ಎಂತಹ ಸಂದರ್ಭದಲ್ಲು ರೈತ ಆತ್ಮಹತ್ಯೆ ದಾರಿ ಹಿಡಿಯುವುದಿಲ್ಲವೆಂದು  ರೈತರಲ್ಲಿ  ಪ್ರತಿಜ್ಞೆ ಮಾಡಿಸಿ ಹಿಡಿ ಅಕ್ಕಿಯನ್ನು ಸಂಗ್ರಹಿಸಿ ಅದನ್ನು ಜಿಲ್ಲಾ ಕೇಂದ್ರಕ್ಕೆ ಧಾರ್ಮಿಕ ಕೇಂದ್ರಗಳಲ್ಲಿ ಅಡುಗೆ ಮಾಡಿ ರೈತರೊಂದಿಗೆ ಊಟ ಮಾಡುವ ಅಭಿಯಾನ ಇದಾಗಿದೆ.  

ದಾವಣಗೆರೆ ನಗರದ ಪ್ರಮುಖ ವೃತ್ತಗಳಲ್ಲಿ ಮೋದಿ ಯುಡಿಯೂರಪ್ಪ ಸೇರಿದಂತೆ ಬಿಜೆಪಿ ಮುಖಂಡರ ಪ್ಲೆಕ್ಸ್ ಗಳು ರಾರಾಜಿಸುತ್ತಿವೆ.  ಆದ್ರೆ ಈ ಬಿಜೆಪಿ ಫ್ಲೆಕ್ಸ್ ಗಳಿಗಿಂತ ಕಾಂಗ್ರೆಸ್ ಮುಖಂಡ ಎಸ್ ಎಸ್ ಮಲ್ಲಿಕಾರ್ಜುನ್ ಹಾಗು ಶಾಮನೂರು ಶಿವಶಂಕರಪ್ಪ ಇತರ ಕಾಂಗ್ರೆಸ್ ಮುಖಂಡರ ಫ್ಲೆಕ್ಸ್ ಗಳು ಎಲ್ಲೆಡೆ ಕಣ್ಣಿಗೆ ರಾಚುತ್ತಿವೆ. ಬಿಜೆಪಿಯವರು ಬೃಹತ್ ರೈತ ಸಮಾವೇಶ, ಮೋದಿ ಬರುತ್ತಿರುವುದಕ್ಕೆ ಸ್ವಾಗತ ಕೋರುವ ಫ್ಲೆಕ್ಸ್ ಗಳನ್ನು ಹಾಕಿದ್ರೆ ಕಾಂಗ್ರೆಸ್ ನವರು ಮೂರು ದಿನಗಳ ಕಾಲ ನಡೆಯುವ ದುರ್ಗಮ್ಮ ದೇವಿಯ ಜಾತ್ರಾಮಹೋತ್ಸವಕ್ಕೆ ಶುಭ ಕೋರಿದ್ದಾರೆ. ಒಟ್ಟಿನಲ್ಲಿ ಕರ್ನಾಟಕದಲ್ಲಿ ಮೋದಿಯವರ ಮೂರನೇ ಚುನಾವಣಾ ರ್ಯಾಲಿ ಇದಾಗಿದ್ದು ಬಿಜೆಪಿ ಶಕ್ತಿ ತುಂಬುವ ಹಿನ್ನಲೆಯಲ್ಲಿ ಐತಿಹಾಸಿಕ ಸಮಾವೇಶ ಆಗಲಿದೆ. 

loader