ರಾಂಚಿ[ಜೂ. 21] :ರಾಂಚಿಯಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ಒಟ್ಟು 40 ಸಾವಿರ ಜನರೊಂದಿಗೆ ಯೋಗ ಮಾಡಿದರು.

5ನೇ ಯೋಗ ದಿನವನ್ನು ಆಚರಣೆ ಮಾಡಲಾಗುತಿದ್ದು, ರಾಂಚಿಯಲ್ಲಿ ಪ್ರಧಾನಿ ಯೋಗದ ಮಹತ್ವದ ಬಗ್ಗೆ ಮಾತನಾಡಿದರು. ಯೋಗ  ಮಾಡುವುದರಿಂದ ಅನಾರೋಗ್ಯ ಹೊಡೆದೋಡಿಸಿ,  ಮಾನಸಿ, ದೈಹಿಕ ಸದೃಢತೆ ಸಾಧಿಸಬಹುದು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಾರ್ಖಂಡ್ ಸಿಎಂ ರಘುಬರ್ ದಾಸ್ ಸಾಥ್ ನೀಡಿದ್ದು,  ಜಾರ್ಖಂಡ್‌ ರಾಜ್ಯಪಾಲರಾದ ದ್ರೌಪದಿ ಮುರ್ಮು, ಕೇಂದ್ರ ಆಯುಷ್‌ ಸಚಿವ ಶ್ರೀಪಾದ್‌ ಯೆಸ್ಸೊ ನಾಯಕ್‌, ರಾಜ್ಯ ಆರೋಗ್ಯ ಸಚಿವ ರಾಮಚಂದ್ರ ಚಂದ್ರವಂಶಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಥ್ ನೀಡಿದರು.