ಮೋದಿ 2.0 ಸರ್ಕಾರದ ಮೊದಲ ಸಚಿವ ಸಂಪುಟ ಸಭೆ| ದೇಶ ರಕ್ಷಣೆ ಮಾಡುವವರಿಗೆ ಮೋದಿ ಸರ್ಕಾರದ ಕೊಡುಗೆ| ಪ್ರಧಾನಮಂತ್ರಿ ವಿದ್ಯಾರ್ಥಿ ವೇತನ ಯೋಜನೆಯಲ್ಲಿ ಮಹತ್ತರ ಬದಲಾವಣೆ| ರಾಷ್ಟ್ರೀಯ ರಕ್ಷಣಾ ನಿಧಿ ವ್ಯಾಪ್ತಿಗೆ ಬರುವ ಪ್ರಧಾನಮಂತ್ರಿ ವಿದ್ಯಾರ್ಥಿ ವೇತನ| ಯೋಧರ ಮಕ್ಕಳಿಗಿದ್ದ 2000 ರೂ. ವಿದ್ಯಾರ್ಥಿ ವೇತನವನ್ನು 2,500 ರೂ.ಗಳಿಗೆ ಏರಿಕೆ| ವಿದ್ಯಾರ್ಥಿನಿಯರ ವಿದ್ಯಾರ್ಥಿ ವೇತನ 2,250 ರೂ.ದಿಂದ 3,000 ರೂ.ಗೆ ಏರಿಕೆ| ನಕ್ಸಲ್ ಹಾಗೂ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ರಾಜ್ಯ ಪೊಲೀಸ್ ಅಧಿಕಾರಿಗಳ ಮಕ್ಕಳಿಗೂ ಲಭ್ಯ|
ನವದೆಹಲಿ(ಮೇ.31): ಪ್ರಧಾನಿ ನರೇಂದ್ರ ಮೋದಿ 2.0 ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ಇಂದು ನಡೆದಿದ್ದು, ದೇಶ ರಕ್ಷಣೆ ಮಾಡುವವರಿಗೆ ಕೊಡುಗೆ ನೀಡಲಾಗಿದೆ.
ರಾಷ್ಟ್ರೀಯ ರಕ್ಷಣಾ ನಿಧಿ ವ್ಯಾಪ್ತಿಗೆ ಬರುವ ಪ್ರಧಾನಮಂತ್ರಿ ವಿದ್ಯಾರ್ಥಿ ವೇತನ ಯೋಜನೆಯಲ್ಲಿ ಕೆಲವು ಮಹತ್ತರ ಬದಲಾವಣೆಗಳನ್ನು ಮಾಡಲು ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಯೋಧರ ಮಕ್ಕಳಿಗೆ ಈ ಹಿಂದೆ ಮಾಸಿಕ 2000 ರೂ. ಇದ್ದ ವಿದ್ಯಾರ್ಥಿ ವೇತನವನ್ನು ಇದೀಗ ವಿದ್ಯಾರ್ಥಿಗಳಿಗೆ 2,500 ರೂ.ಗಳಿಗೆ ಏರಿಕೆ ಮಾಡಲಾಗಿದ್ದರೆ, ವಿದ್ಯಾರ್ಥಿನಿಯರಿಗೆ 2,250 ರೂ.ದಿಂದ 3,000 ರೂ.ಗೆ ಏರಿಕೆ ಮಾಡಲಾಗಿದೆ.
ವಿದ್ಯಾರ್ಥಿ ವೇತನದ ವ್ಯಾಪ್ತಿಯನ್ನು ನಕ್ಸಲ್ ಹಾಗೂ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ರಾಜ್ಯ ಪೊಲೀಸ್ ಅಧಿಕಾರಿಗಳ ಮಕ್ಕಳಿಗೆ ಲಭ್ಯವಾಗುವಂತೆ ವಿಸ್ತರಿಸಲಾಗಿದೆ. ಇದೇ ವೇಳೆ ರಾಜ್ಯ ಪೊಲೀಸ್ ಅಧಿಕಾರಿಗಳ ಮಕ್ಕಳಿಗೆ ಹೊಸದಾಗಿ ವಿದ್ಯಾರ್ಥಿ ವೇತನ ಪಡೆಯುವ ಮಿತಿಯನ್ನು ವಾರ್ಷಿಕ 500 ರೂ.ಗೆ ನಿಗದಿಪಡಿಸಲಾಗಿದೆ.
