21 ನೇ ಶತಮಾನದಲ್ಲಿ ಸಂಪರ್ಕವು ಪ್ರಮುಖವಾಗಿದ್ದು ಪ್ರವಾಸೋದ್ಯಮ ವಲಯದ ಅಭಿವೃದ್ಧಿಗೆ ವಾಯು ಸಂಪರ್ಕವು ಪ್ರಮುಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹರನಿಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿ ಹೇಳಿದರು.
ವಡೋದರ (ಅ.22): 21 ನೇ ಶತಮಾನದಲ್ಲಿ ಸಂಪರ್ಕವು ಪ್ರಮುಖವಾಗಿದ್ದು ಪ್ರವಾಸೋದ್ಯಮ ವಲಯದ ಅಭಿವೃದ್ಧಿಗೆ ವಾಯು ಸಂಪರ್ಕವು ಪ್ರಮುಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹರನಿಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿ ಹೇಳಿದರು.
“ನಮ್ಮ ದೇಶಕ್ಕೆ ಸಂಪರ್ಕ ಬಹಳ ಪ್ರಮುಖವಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ವಾಯು ಸಂಪರ್ಕ ತುಂಬಾ ಮುಖ್ಯ. ಉತ್ತಮ ವಾಯು ಸಂಪರ್ಕ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದರಿಂದ ದೇಶಕ್ಕೆ ಹೆಚ್ಚು ಆದಾಯ ಬರುತ್ತದೆ. ನೂತನ ವಿಮಾನಯಾನ ನೀತಿಯನ್ನು ನಮ್ಮ ಸರ್ಕಾರ ಜಾರಿಗೊಳಿಸಿದ್ದು ಇದು ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ" ಎಂದು ಮೋದಿ ಹೇಳಿದರು.
ಭಾರತದಲ್ಲಿ ಪ್ರವಾಸೋದ್ಯಮದ ವಲಯದಲ್ಲಿ ನಿಯಮಿತ ಅವಕಾಶಗಳಿವೆ. ವಡೋದರಾ ಈ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದೆ ಎಂದು ಮೋದಿ ಶ್ಲಾಘಿಸಿದರು.
