ಉತ್ತರ ಪ್ರದೇಶದ ಖುಷಿನಗರದಲ್ಲಿ ನಡೆದ ಬಿಜೆಪಿ 'ಪರಿವರ್ತನ್‌ ಯಾತ್ರಾ ರ‍್ಯಾಲಿ'ಯಲ್ಲಿ ಮಾತನಾಡಿದ ಮೋದಿ, ‘ಕಪ್ಪು ಹಣ, ಭ್ರಷ್ಟಾಚಾರಕ್ಕೆ ನಾನು ತಡೆ ಒಡ್ಡಿದ್ದೇನೆ, ಕೆಲವರು ಭಾರತ್‌ ಬಂದ್‌ಗೆ ಕರೆ ನೀಡಿದ್ದಾರೆ ಎಂದು ವಿಪಕ್ಷಗಳ ವಿರುದ್ಧ ಚಾಟಿ ಬೀಸಿದ್ದಾರೆ.

ಖುಷಿನಗರ, ಉತ್ತರ ಪ್ರದೇಶ (ನ.27): ನೋಟ್‌ ನಿಷೇಧ ಕ್ರಮ ವಿರೋಧಿಸಿ ನಾಳೆ ಬಂದ್‌ಗೆ ಕರೆ ನೀಡಿರುವ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಕಪ್ಪು ಹಣದ ಹಾದಿಯನ್ನು ಬಂದ್‌ ಮಾಡಬೇಕೇ ಅಥವಾ ಭಾರತ್‌ ಬಂದ್‌ ಮಾಡಬೇಕೇ ಎಂದು ಮೋದಿ ಪ್ರಶ್ನಿಸಿದ್ದಾರೆ.

ಉತ್ತರ ಪ್ರದೇಶದ ಖುಷಿನಗರದಲ್ಲಿ ನಡೆದ ಬಿಜೆಪಿ 'ಪರಿವರ್ತನ್‌ ಯಾತ್ರಾ ರ‍್ಯಾಲಿ'ಯಲ್ಲಿ ಮಾತನಾಡಿದ ಮೋದಿ, ‘ಕಪ್ಪು ಹಣ, ಭ್ರಷ್ಟಾಚಾರಕ್ಕೆ ನಾನು ತಡೆ ಒಡ್ಡಿದ್ದೇನೆ, ಕೆಲವರು ಭಾರತ್‌ ಬಂದ್‌ಗೆ ಕರೆ ನೀಡಿದ್ದಾರೆ ಎಂದು ವಿಪಕ್ಷಗಳ ವಿರುದ್ಧ ಚಾಟಿ ಬೀಸಿದ್ದಾರೆ.

ಯಾವುದೇ ಪಕ್ಷದ ಹೆಸರು ಪ್ರಸ್ತಾಪಿಸದ ಮೋದಿ, 'ಭ್ರಷ್ಟಾಚಾರವನ್ನು ಮಟ್ಟಹಾಕಲು ನಾವು ಪ್ರಯತ್ನಿಸುತ್ತಿದ್ದೇವೆ, ಅವರು ಭಾರತ್‌ ಬಂದ್‌ಗೆ ವ್ಯವಸ್ಥೆ ಮಾಡುತ್ತಿದ್ದಾರೆ. ಭ್ರಷ್ಟಾಚಾರದ ಹಾದಿ ಬಂದ್‌ ಆಗಬೇಕೇ ಅಥವಾ ಭಾರತ್‌ ಬಂದ್‌ ಆಗಬೇಕೇ' ಎಂದು ಸಭಿಕರನ್ನು ಪ್ರಶ್ನಿಸಿದರು.