ದೇಶದೆಲ್ಲೆಡೆ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಸುದ್ದಿ ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ. ಮಾವೋ ಸಿದ್ಧಾಂತಿ, ಕ್ರಾಂತಿಕಾರಿ ಬರಹಗಾರ, ಪಿ ವರವರ ರಾವ್‌ ಸೇರಿದಂತೆ ಐವರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಪರವಾಗಿ ಮಾತನಾಡುತ್ತಿರುವವರಿಗೆ ಬಿಜೆಪಿ ನಾಯಕ ಸಿಟಿ ರವಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಲೈವ್ ಬಂದು ಟಾಂಗ್ ನೀಡಿದ್ದಾರೆ.

ಬೆಂಗಳೂರು[ಸೆ.2] ಸುಮಾರು 11 ನಿಮಿಷಗಳ ಕಾಲ ಫೇಸ್ ಬುಕ್ ಲೈವ್ ಬಂದ ಸಿಟಿ ರವಿ ಸಾಕೇತ್ ರಾಜನ್ ಹತ್ಯೆಯಿಂದ ಕುರುತಾದ ವಿಚಾರಗಳನ್ನು ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವರವರರಾವ್ ಯಾರು? ಧರ್ಮಸಿಂಗ್ ಕಾಲದಲ್ಲಿ ಸಾಕೇತ್ ರಾಜನ್ ಹ್ಯತೆಯಾದಾಗ ಇದೇ ವರವರರಾವ್ ಪ್ರತಿಭಟನೆ ಮಾಡಿದ್ದರು. ದೇಶ ವಿರೋಧಿಗಳ ಜತೆಗೆ ನಿಲ್ಲುವ ನಗರ ನಕ್ಸರನ್ನು ರವಿ ತುಕಡೆ ಗ್ಯಾಂಗ್ ಎಂದು ಕರೆದಿದ್ದಾರೆ.

ಇಡೀ ಪ್ರಕರಣದ ಮಾಸ್ಟರ್ ಮೈಂಡ್ ವರವರರಾವ್

ದೇಶವನ್ನು, ಸಮಾಜವನ್ನು ತುಂಡು ಮಾಡುವುದಕ್ಕೆ ಸದಾ ಇವರ ಹೋರಾಟ ನಡೆಯುತ್ತಿರುತ್ತದೆ. ಪ್ರಜಾಪ್ರಭುತ್ವದ ಮೇಲೆ ಇವರಿಗೆ ನಂಬಿಕೆ ಇಲ್ಲ. ಇವರು ಬುಲೆಟ್ ನಂಬಿದವರು.. ಇಂಥವರು ಸಂವಿಧಾನದ ಬಗ್ಗೆ ಮಾತನಾಡುತ್ತಾರೆ ಎಂದು ಜಾಡಿಸಿದ್ದಾರೆ. ಹಾಗಾದರೆ ರವಿ ಏನೆಲ್ಲಾ ಹೇಳಿದರು?