ನೋಟುಗಳ ಹಿಂಪಡೆಯುವುದರ ಬಗ್ಗೆ ಅಭಿಪ್ರಾಯ ನೀಡುವಂತೆ ಜನರಿಗೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ. ‘‘ಕೇಂದ್ರ ಕೈಗೊಂಡಿರುವ ಕ್ರಮದ ಬಗ್ಗೆ ಖುದ್ದು ನಿಮ್ಮಿಂದಲೇ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ,’’ ಎಂದು ಬರೆದುಕೊಂಡಿದ್ದಾರೆ.

ನವದೆಹಲಿ(ನ.23): ನೋಟು ರದ್ದತಿ ಕುರಿತಂತೆ ಸಂಸತ್‌ನಲ್ಲಿ ಹೇಳಿಕೆ ನೀಡಬೇಕು ಎಂಬ ಪ್ರತಿಪಕ್ಷಗಳ ಒತ್ತಾಯದ ಬಗ್ಗೆ ವೌನವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಜನರ ಬಳಿ ಈ ಕ್ರಮ ಕುರಿತಂತೆ ಅಭಿಪ್ರಾಯ ಕೋರಿದ್ದಾರೆ. ತಮ್ಮದೇ ಹೆಸರಿನಲ್ಲಿರುವ ಆ್ಯಪ್‌ನಲ್ಲಿ ಅಭಿಪ್ರಾಯ ತಿಳಿಸಬಹುದು ಎಂಬುದು ಅವರ ಮಾತು.

ಅತ್ತ, ಸಂಸತ್‌ನ ಉಭಯ ಸದನಗಳಲ್ಲೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಒಗ್ಗಟ್ಟಿನ ದಾಳಿ ನಡೆಸಿವೆ. ಮಂಗಳವಾರ ಕೂಡ ಸಂಸತ್‌ನ ಕಲಾಪ ಗದ್ದಲಕ್ಕೆ ಸಾಕ್ಷಿಯಾಗಿದ್ದು, ಬುಧವಾರಕ್ಕೆ ಮುಂದೂಡಿಕೆಯಾಗಿದೆ. ಸದನದ ಹೊರಗೆ ಮಾತನಾಡಿದ ಸಿಪಿಎಂನ ಸೀತಾರಾಂ ಯೆಚೂರಿ ಅವರು, ಇಂಥ ಮಹತ್ವದ ವಿಚಾರಗಳ ಬಗ್ಗೆ ಸದನದಲ್ಲಿ ಮಾತನಾಡದೇ ಇರುವುದು ಸಂಸತ್‌ಗೆ ನಿಂದನೆ ಮಾಡಿದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಸಂಸತ್‌ನ ಉಲ್ಲಂಘನೆ ನೋಟಿಸ್ ನೀಡಲು ಸಿಪಿಎಂ ಮುಂದಾಗಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂ ಕೂಡ, ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ‘‘ಪ್ರಧಾನಿ ಅವರಿಗೆ ಬೇರೆ ಕಾರ್ಯಕ್ರಮಗಳಲ್ಲಿ ಮಾತನಾಡಲು ಸಮಯ ಸಿಗುತ್ತದೆ, ಆದರೆ ಸಂಸತ್‌ನಲ್ಲಿ ಉತ್ತರಿಸಲು ಸಮಯವಿಲ್ಲ,’’ ಎಂದು ವ್ಯಂಗ್ಯವಾಡಿದ್ದಾರೆ.

ಸಲಹೆ ಆಹ್ವಾನ: ನೋಟುಗಳ ಹಿಂಪಡೆಯುವುದರ ಬಗ್ಗೆ ಅಭಿಪ್ರಾಯ ನೀಡುವಂತೆ ಜನರಿಗೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ. ‘‘ಕೇಂದ್ರ ಕೈಗೊಂಡಿರುವ ಕ್ರಮದ ಬಗ್ಗೆ ಖುದ್ದು ನಿಮ್ಮಿಂದಲೇ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ,’’ ಎಂದು ಬರೆದುಕೊಂಡಿದ್ದಾರೆ. ಕಪ್ಪುಹಣ ದೇಶದಲ್ಲಿದೆ ಎಂದು ಭಾವಿಸುತ್ತಿರಾ?, ನೋಟುಗಳನ್ನು ಹಿಂಪಡೆದಿರುವುದು ಸಮರ್ಥನೀಯವೇ ಎಂಬ ಪ್ರಶ್ನೆಗಳೂ ಇವೆ.

ಇನ್ನೂ ಇದೆ ಕ್ರಮಗಳು: ಇದಾದ ಬಳಿಕ ಬಿಜೆಪಿ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಕಪ್ಪುಹಣದ ವಿರುದ್ಧದ ಸಮರ ಈಗಷ್ಟೇ ಆರಂಭವಾಗಿದೆ. ನೋಟುಗಳ ಹಿಂಪಡೆಯಿಕೆ ಮುಕ್ತಾಯವಲ್ಲ ಎಂದಿದ್ದಾರೆ. ಬಡವರು, ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರು ಕಪ್ಪುಹಣ, ನಕಲಿ ನೋಟುಗಳಿಂದಾಗಿ ನೊಂದಿದ್ದಾರೆ. ತಮ್ಮ ನೇತೃತ್ವದ ಸರ್ಕಾರ ಈ ಪಿಡುಗುಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದ್ದಾರೆ. ಆದಾಯ ಘೋಷಣಾ ಕ್ರಮ ಮತ್ತು ಕಪ್ಪುಹಣ ಪ್ರಕರಣಗಳ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಹೇಳಿದ್ದಾರೆ. ನಾವು ನಮಗಾಗಿ ಅಕಾರಕ್ಕೆ ಬಂದಿಲ್ಲ, ಬಡವರಿಗಾಗಿ ಅಕಾರಕ್ಕೇರಿದ್ದೇವೆ ಎಂದಿದ್ದಾರೆ.

ಇದಾದ ಬಳಿಕ ಸಂಜೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋದಿ ಸಾರ್ವಜನಿಕರು ನೋಟು ಹಿಂಪಡೆದಿರುವುದಕ್ಕೆ ಬೆಂಬಲ ನೀಡಿದರೆ, ಪ್ರತಿಪಕ್ಷಗಳು ಆಕ್ಷೇಪಿಸುತ್ತಿವೆ. ಸಾರ್ವಜನಿಕ ಜೀವನದಲ್ಲಿರುವವರು ಬಹಿರಂಗವಾಗಿಯೇ ಕಾಳಧನಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದರು. ಈ ರೀತಿ ವೌಲ್ಯಗಳು ಕುಸಿಯುತ್ತಿದ್ದರೆ, ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸದು ಎಂದಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಶುದ್ಧಹಸ್ತರಾಗಿರಬೇಕೆಂದು ಮೋದಿ ಹೇಳಿಕೊಡಿದ್ದಾರೆ.

ಇಂದು ದೆಹಲಿಯಲ್ಲಿ ಪ್ರತಿಭಟನೆ: ಕೇಂದ್ರದ ನಿರ್ಧಾರ ಖಂಡಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಬುಧವಾರ ನವದೆಹಲಿಯ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಅವರೊಂದಿಗೆ ಇತರ ಪ್ರತಿಪಕ್ಷಗಳೂ ಕೈಜೋಡಿಸಬೇಕೆಂದು ಕೋಲ್ಕತಾದಲ್ಲಿ ಒತ್ತಾಯಿಸಿದ್ದಾರೆ. ಸಂಸತ್ ಭವನದ ಮುಂಭಾಗದಲ್ಲಿ ಪ್ರತಿಪಕ್ಷಗಳ ಸದಸ್ಯರು ಬೆಳಗ್ಗೆ ಧರಣಿ ನಡೆಸಲಿದ್ದಾರೆ. ಅದಕ್ಕೆ ಪೂರಕವಾಗಿ ಕಾಂಗ್ರೆಸ್, ಜೆಡಿಯು, ಸಿಪಿಎಂ, ಸಿಪಿಐ ಮತ್ತು ಆರ್‌ಜೆಡಿ ನಾಯಕರು ಸಭೆ ಸೇರಿ ಕೇಂದ್ರದ ವಿರುದ್ಧ ಕೈಗೊಳ್ಳಬೇಕಾದ ಪ್ರತಿಭಟನಾ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.

ಕೇರಳ ಅಸೆಂಬ್ಲಿಯಲ್ಲಿ ನಿರ್ಣಯ: ಇತ್ತೀಚೆಗಷ್ಟೇ ನೋಟುಗಳನ್ನು ಹಿಂಪಡೆದಿರುವ ನಿರ್ಧಾರ ಖಂಡಿಸಿ ದೆಹಲಿಯಲ್ಲಿ ವಿಶೇಷ ವಿಧಾನಸಭೆ ಅವೇಶನ ನಡೆಸಲಾಗಿತ್ತು. ಅದೇ ಮಾದರಿಯಲ್ಲಿ ಮಂಗಳವಾರ ಕೇರಳ ವಿಧಾನಸಭೆಯ ವಿಶೇಷ ಅವೇಶನವೂ ನಡೆಯಿತು. ಸಹಕಾರ ಬ್ಯಾಂಕ್‌ಗಳಲ್ಲಿ ಹಳೆಯ ನೋಟುಗಳನ್ನು ಹೊಸ ನೋಟುಗಳ ವಿನಿಮಯ ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡಬೇಕೆಂಬ ನಿರ್ಣಯ ಅಂಗೀಕರಿಸಲಾಯಿತು. ಆಡಳಿತಾರೂಡ ಎಲ್‌ಡಿಎ್ ಮತ್ತು ಪ್ರತಿಪಕ್ಷ ಯುಡಿಎ್ ಒಗ್ಗೂಡಿ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಆದರೆ ಬಿಜೆಪಿಯ ಏಕೈಕ ಸದಸ್ಯ ಓ.ರಾಜಗೋಪಾಲ್ ಆಕ್ಷೇಪ ವ್ಯಕ್ತಪಡಿಸಿ ದೇಶದ ಅರ್ಥ ವ್ಯವಸ್ಥೆ ಸುಧಾರಿಸಲು ಕೇಂದ್ರ ಈ ಕ್ರಮ ಕೈಗೊಂಡಿದೆ ಎಂದರು.

ಒಂದೇ ದಿನ ಐದು ಮಂದಿ ಸಾವು: ನೋಟಿನ ಗಲಾಟೆಗೆ ಮಂಗಳವಾರ ದೇಶದ ವಿವಿಧ ಭಾಗಗಳಲ್ಲಿ ಒಟ್ಟು ಐವರು ಸಾವಿಗೀಡಾಗಿದ್ದಾರೆ. ಉ.ಪ್ರ.ದ ದೆಯೋರಿಯಾದಲ್ಲಿ ಎಟಿಎಂ ಎದುರು ಹಣ ಹಿಂಪಡೆಯುವ ವಿಚಾರದಲ್ಲಿ ಗದ್ದಲ ಉಂಟಾಗಿ ವ್ಯಕ್ತಿ ಅಸುನೀಗಿದ್ದಾರೆ. ಇನ್ನು ಅದೇ ರಾಜ್ಯದ ಬಂದಾ ಜಿಲ್ಲೆಯಲ್ಲಿ ತಂದೆಯ ಜತೆ ಎಟಿಎಂಗೆ ಬಂದಿದ್ದ ಅನಾರೋಗ್ಯಕ್ಕೀಡಾಗಿದ್ದ ಮಗು ಸಾವಿಗೀಡಾಗಿದೆ. ಆಸ್ಪತ್ರೆಗೆ ತೆರಳುವ ಮುನ್ನ ಹಣಪಡೆಯಲು ಎಟಿಎಂ ಮುಂದೆ ನಿಂತಿದ್ದಾಗ ಈ ದುರಂತ ನಡೆದಿದೆ. ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಮಗಳ ಮದುವೆಗೆ ಹಣ ಹೊಂದಾಣಿಕೆ ಮಾಡಲಾಗದ್ದರಿಂದ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಸಹಕಾರ ಬ್ಯಾಂಕ್‌ನಲ್ಲಿ ಠೇವಣಿ ಇರಿಸಲಾಗಿರುವ ಮೊತ್ತ ಹಿಂಪಡೆಯಲಾಗದ್ದಕ್ಕೆ ವೃದ್ಧರೊಬ್ಬರು ನೇಣಿಗೆ ಶರಣಾಗಿದ್ದರೆ, ಕೊಲ್ಲಂ ಜಿಲ್ಲೆಯಲ್ಲಿ ಸರತಿಯಲ್ಲಿ ನಿಂತಿದ್ದ ಚಂದ್ರಶೇಖರನ್ ಎಂಬುವರು ಬಿದ್ದು ಸಾವಿಗೀಡಾಗಿದ್ದಾರೆ.

ಆ್ಯಪ್‌ನಲ್ಲಿರುವ ಪ್ರಶ್ನೆಗಳು

1.ಭಾರತದಲ್ಲಿ ಕಪ್ಪು ಹಣ ಇದೆ ಎಂದು ನಾವು ಭಾವಿಸುತ್ತೀರಾ? ಎ. ಹೌದು ಬಿ. ಇಲ್ಲ

2. ಭ್ರಷ್ಟಾಚಾರ ಮತ್ತು ಕಪ್ಪು ಹಣವೆಂಬ ಪಿಡುಗಿನ ವಿರುದ್ಧ ಹೋರಾಟ ಮಾಡಿ, ನಿರ್ಮೂಲನ

ಮಾಡುವ ಅಗತ್ಯ ಇದೆ ಎಂದು ನಿಮಗೆ ಅನಿಸುತ್ತದೆಯೇ? ಎ. ಹೌದು ಬಿ.ಇಲ್ಲ

3. ಒಟ್ಟಾರೆಯಾಗಿ, ಕಪ್ಪು ಹಣ ತಡೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ನಿಮಗೇನನಿಸುತ್ತದೆ?

4. ಈವರೆಗೆ ಮೋದಿ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಕೈಗೊಂಡಿರುವ ಪ್ರಯತ್ನಗಳ ಬಗ್ಗೆ

ನಿಮಗೇನನಿಸುತ್ತದೆ?

1 ರಿಂದ 5ರವರೆಗಿನ ಶ್ರೇಣಿ - ಅದ್ಭುತ, ಅತಿ ಉತ್ತಮ, ಉತ್ತಮ, ಓಕೆ, ನಿಷ್ಪ್ರಯೋಜಕ.

5. 500, 1 ಸಾವಿರ ೋಟುಗಳನ್ನು ರದ್ದು ಮಾಡಿದ ಮೋದಿ ಸರ್ಕಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಎ. ಸರಿಯಾದ ದಿಕ್ಕಿನಲ್ಲಿ ಶ್ರೇಷ್ಠ ನಡೆ, ಬಿ. ಉತ್ತಮ ನಡೆ, ಸಿ. ಇದರಿಂದ ಏನೂ ಬದಲಾವಣೆ ಆಗಲ್ಲ.

6. ನೋಟು ರದ್ದತಿ ಕಪ್ಪುಹಣ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ಹತ್ತಿಕ್ಕಲು ನೆರವಾಗುತ್ತದೆ ಎಂದು ನಿಮಗನಿಸುತ್ತದೆಯೇ?

ಎ. ಇದು ತಕ್ಷಣಕ್ಕೇ ಪ್ರಭಾವ ಬೀರುತ್ತದೆ, ಬಿ. ಮಧ್ಯಮ ಮತ್ತು ದೀರ್ಘಕಾಲೀನ ಪ್ರಭಾವ ಹೊಂದಿದೆ. ಸಿ. ಕನಿಷ್ಠ ಪ್ರಭಾವ, ಸಿ. ಗೊತ್ತಿಲ್ಲ.

7. ನೋಟು ರದ್ದತಿ ರಿಯಲ್ ಎಸ್ಟೇಟ್, ಉನ್ನತ ಶಿಕ್ಷಣ, ಆರೋಗ್ಯ ಸೇವೆ ಸಾಮಾನ್ಯ ಜನರಿಗೆ ಕೈಗೆಟಕುವಂತೆ ಮಾಡುತ್ತದೆ

ಎ. ಸಂಪೂರ್ಣ ಒಪ್ಪುತ್ತೇನೆ ಬಿ. ಭಾಗಶಃ ಒಪ್ಪುತ್ತೇನೆ ಸಿ. ಏನೂ ಹೇಳಲ್ಲ.

8. ಭ್ರಷ್ಟಾಚಾರ, ಕಪ್ಪುಹಣ, ಭಯೋತ್ಪಾದನೆ ಮತ್ತು ಖೋಟಾ ನೋಟು ಚಲಾವಣೆ ಹತ್ತಿಕ್ಕುವ ನಮ್ಮ ಹೋರಾಟದಿಂದ ತಮಗಾದ ತೊಂದರೆಗೆ ಬೇಸತ್ತಿದ್ದೀರಾ

ಅ. ಖಂಡಿತಾ ಇಲ್ಲ., ಬಿ. ಸ್ವಲ್ಪ ಮಾತ್ರ, ಆದರೂ ಇದು ವೌಲ್ಯಯುತ, ಸಿ. ಹೌದು.

9. ಕೆಲವು ಭ್ರಷ್ಟಾಚಾರ ವಿರೋ ಕಾರ್ಯಕರ್ತರು ಈಗ ನಿಜವಾಗಿ ಕಪ್ಪುಹಣ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆಗೆ ಬೆಂಬಲ ನೀಡುತ್ತಿದ್ದಾರೆ ಎಂದು ನೀವು ಭಾವಿಸುತ್ತೀರಾ?

ಎ. ಹೌದು, ಬಿ. ಇಲ್ಲ.

10. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ನೀವು ನಿಮ್ಮ ಸಲಹೆ, ಕಲ್ಪನೆ, ಒಳನೋಟವನ್ನು ಹಂಚಿಕೊಳ್ಳಲು ಬಯಸುತ್ತೀರಾ?