ಭಾರತ- ಜಪಾನ್ 13ನೇ ವಾರ್ಷಿಕ ಶೃಂಗಸಭೆ! ಟೋಕಿಯೋ ತಲುಪಿದ ಪ್ರಧಾನಿ ನರೇಂದ್ರ ಮೋದಿ! ಸದೃಢ ಕಾರ್ಯತಂತ್ರಗಳ ಕುರಿತಂತೆ ಮಾತುಕತೆ! ರಕ್ಷಣೆ, ಭದ್ರತೆ, ಇಂಡೋ-ಫೆಸಿಪಿಕ್ ಸಹಕಾರ ಚರ್ಚೆ
ಟೊಕಿಯೋ(ಅ.27): 13ನೇ ಭಾರತ- ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಜಪಾನ್ ರಾಜಧಾನಿ ಟೋಕಿಯೋಗೆ ಬಂದಿಳಿದಿದ್ದಾರೆ.
ಉಭಯ ದೇಶಗಳ ನಡುವಣ ಸದೃಢ ಕಾರ್ಯತಂತ್ರಗಳ ಕುರಿತಂತೆ ಶೃಂಗಸಭೆ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ನಡುವೆ ಮಾತುಕತೆ ನಡೆಯಲಿದೆ.
ನಾಳೆ ಮತ್ತು ನಾಡಿದ್ದು ನಡೆಯಲಿರುವ ಶೃಂಗಸಭೆಯಲ್ಲಿ ರಕ್ಷಣೆ, ಭದ್ರತೆ, ಇಂಡೋ-ಫೆಸಿಪಿಕ್ ಸಹಕಾರ, ಮತ್ತು ತಂತ್ರಜ್ಞಾನ ಮತ್ತಿತರ ಕ್ಷೇತ್ರಗಳಲ್ಲಿ ಸಹಭಾಗಿತ್ವ ಕುರಿತು ವ್ಯಾಪಕ ಮಾತುಕತೆ ನಡೆಯುವ ಸಾಧ್ಯತೆ ಇದೆ.
28 ರಂದು ಯಾಮಾನಾಶಿಯಲ್ಲಿ ಶಿಂಜೋ ಅಬೆ ಆಯೋಜಿಸಿರುವ ಔತಣಕೂಟದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ 29 ರಂದು ಟೋಕಿಯೋದಲ್ಲಿ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಭಾಷಣ ಮಾಡಲಿದ್ದಾರೆ.
