ನವದೆಹಲಿ(ಫೆ.15): ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ CRPF ವೀರ ಯೋಧರಿಗೆ ನವದೆಹಲಿಯಲ್ಲಿ ಗಣ್ಯರಿಂದ ಅಂತಿಮ ನಮನ ಸಲ್ಲಿಸಲಾಯಿತು.

ಪ್ರಧಾನಿ ನರೇಂದ್ರ, ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ದೆಹಲ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಅನೇಕ ಗಣ್ಯರು ಹುತಾತ್ಮ ಯೋಧರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ ಮುಖ್ಯಸ್ಥರೂ ಕೂಡ ಹುತಾತ್ಮ ಯೋಧರ ಅಂತಿಮ ದರ್ಶನ ಪಡೆದರು.

ಹುತಾತ್ಮರ ಕಳೆಬರಹದ ಸುತ್ತ ಒಂದು ಸುತ್ತು ತಿರುಗಿದ ಪ್ರಧಾನಿ ಮೋದಿ, ಯೋಧರ ಕಳೆಬರಹಕ್ಕೆ ಕೈ ಮುಗಿಯುತ್ತಾ ಮುನ್ನಡೆದರು. ಈ ವೇಳೆ ಇಡೀ ಸಭಾಂಗಣದಲ್ಲಿ ಮೌನ ಆವರಿಸಿತ್ತು.