ನವದೆಹಲಿ(ಜೂ.06): ಎರಡನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮರುಕ್ಷಣದಿಂದಲೇ ಕಾರ್ಯ ಪ್ರವೃತ್ತರಾಗಿರುವ ಪ್ರಧಾನಿ ಮೋದಿ, ಹಲವು ಅಭಿವೃದ್ಧಿ ಕಾರ್ಯಗಳ ಪೂರ್ಣಗೊಳಿಸುವಿಕೆಗೆ 2022ನ್ನು ಡೆಡ್‌ಲೈನ್ ಎಂದು ಪರಿಗಣಿಸಿದ್ದಾರೆ.

ಪ್ರಮುಖವಾಗಿ ಗೃಹ ನಿರ್ಮಾಣ, ರಸ್ತೆ ನಿರ್ಮಾಣ, ಕುಡಿಯುವ ನೀರು ಮುಂತಾದ ಜನಸಾಮಾನ್ಯರ ಬೇಡಿಕೆಗಳನ್ನು ಈಡೇರಿಸಲು ಪ್ರಧನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಜ್ಜಾಗಿದೆ.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಹಲವು ಬಾರಿ ಮಿಶನ್ 2022 ಕುರಿತು ಪ್ರಸ್ತಾಪಿಸಿದ್ದರು. ಅದರಂತೆ ಈಗಾಗಲೇ ಕ್ಯಾಬಿನೆಟ್ ಸಚಿವರ ಸಮಿತಿ ರಚೆನಾಯಗಿದ್ದು, ಮಿಶನ್ 2022 ಮೇಲೆ ಗಮನ ಕೇಂದ್ರೀಕರಿಸಲಾಗಿದೆ.

ಅಲ್ಲದೇ ಈ ಸಮಿತಿಗೆ 1 ಸಾವಿರ ದಿನದ ಯೋಜನೆಯ ನೀಲನಕ್ಷೆ ಸಿದ್ದಪಡಿಸಲು ಪ್ರಧಾನಿ ಮೋದಿ ಆದೇಶಿಸಿದ್ದು, ಒಟ್ಟು 75 ಯೋಜನೆಗಳನ್ನು 2022ರೊಳಗಾಗಿ ಪೂರ್ಣಗೊಳಿಸಲು ಸರ್ಕಾರ ಸರ್ವಸನ್ನದ್ಧವಾಗಿದೆ ಎಂದು ಹೇಳಲಾಗಿದೆ.